‘ಸಿಬಿಎಫ್ಸಿ’ ಸರ್ವಾಧಿಕಾರಿ ನಡವಳಿಕೆ

ಟ್ಯುನೀಷಿಯಾದ ನಿರ್ದೇಶಕಿ ಕೌತೆರ್ ಬೆನ್ ಹನಿಯಾ ನಿರ್ದೇಶನದ ‘ದಿ ವಾಯ್ಸ್ ಆಫ್ ಹಿಂದ್ ರಜಾಬ್’ ಸಿನಿಮಾ, ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಿಂದ ಬಚಾವಾಗಲು ಯತ್ನಿಸಿದ ರಜಾಬ್ ಎಂಬ ಬಾಲಕಿ, ಸಹಾಯಕ್ಕೆ ಮೊರೆ ಇಡುತ್ತಾ ಅಸುನೀಗುವ ಕಥಾವಸ್ತು ಉಳ್ಳದ್ದಾಗಿದೆ. ಆಸ್ಕರ್ ಪ್ರಶಸ್ತಿ ಸ್ಪರ್ಧೆಯ ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಕೊನೆಯ ಸುತ್ತಿಗೆ ನಾಮ ಕರಣಗೊಂಡಿದ್ದ ಈ ಸಿನಿಮಾವನ್ನು ಕೇರಳ ಹಾಗೂ ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುವುದಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಒಪ್ಪಿಗೆ ನೀಡಿರಲಿಲ್ಲ. ಇದೀಗ, ಈ ಸಿನಿಮಾವನ್ನು ಭಾರತದಲ್ಲಿ ವಿತರಿಸುವ ಹಕ್ಕು ಹೊಂದಿರುವ ‘ಜೈ ವಿರಾತ್ರ ಎಂಟರ್
ಟೈನ್ಮೆಂಟ್ ಸಂಸ್ಥೆ’ ಕೂಡ, ‘ಸಿಬಿಎಫ್ಸಿ’ ಪ್ರಮಾಣಪತ್ರ ಪಡೆಯಲು ವಿಫಲ ವಾಗಿದೆ. ನಿರಾಕರಣೆಗೆ ಮಂಡಳಿ ಕೊಟ್ಟ ಕಾರಣ: ‘ಪ್ರದರ್ಶನಕ್ಕೆ ಪರವಾನಿಗೆ ಕೊಟ್ಟರೆ ಭಾರತ–ಇಸ್ರೇಲ್ ಸಂಬಂಧ ಹಾಳಾಗುತ್ತದೆ’ ಎನ್ನುವುದು. ಇಸ್ರೇಲಿನ ಸಕಲ ಆಕ್ರಮಣ ಕೃತ್ಯಗಳಿಗೆ ಅಭಯಹಸ್ತ ನೀಡಿ ಪೋಷಿಸುವ ಅಮೆರಿಕ, ಬ್ರಿಟನ್ ದೇಶಗಳಲ್ಲಿ ಪ್ರದರ್ಶನಗೊಂಡಿರುವ ಸಿನಿಮಾವು ಭಾರತದಲ್ಲಿ ಪ್ರದರ್ಶನವಾದರೆ ಇಸ್ರೇಲಿಗೆ ನೋವಾದೀತು ಎನ್ನುವುದು ಸಿಬಿಎಫ್ಸಿ ಕಾಳಜಿ! ಇದು ಆತಂಕಕಾರಿ ಸರ್ವಾಧಿಕಾರವಲ್ಲದೆ ಮತ್ತೇನು? ಸೆನ್ಸಾರ್ ಮಂಡಳಿಯ ಧೋರಣೆ ಖಂಡನಾರ್ಹ.

-ಕೆ. ಫಣಿರಾಜ್, ಉಡುಪಿ

ಮಾತಿನ ಬೇಗೆ ನಡುವೆ ಸುಳಿದ ತಂಗಾಳಿ

ಅಸಭ್ಯ ಹಾಗೂ ಅಸಹ್ಯ ಬೈಗುಳಗಳೊಂದಿಗೆ ರಾಜಕಾರಣಿಗಳು ಒಬ್ಬರ ಮೇಲೆ ಒಬ್ಬರು ಮುಗಿಬೀಳುವುದನ್ನು ಓದಿ, ಟೀವಿಗಳಲ್ಲಿ ನೋಡಿ ಜಿಗುಪ್ಸೆಯಾಗುತ್ತಿರುವ ಸಂದರ್ಭದಲ್ಲಿ, ಬಿರುಬಿಸಿಲ ಬೇಗೆಯಲ್ಲಿ ತಂಪಾದ ಗಾಳಿ ಸುಳಿದಂತೆ ಒಂದೆರಡು ಸುದ್ದಿಗಳು ಕಾಣಿಸಿದವು. ಮೊದಲನೆಯದು, ಮಲ್ಲಿಕಾರ್ಜುನ ಖರ್ಗೆ ಅವರು, ‘ದೇವೇಗೌಡರು ಪ್ರೀತಿಸಿದ್ದು ನಮ್ಮನ್ನು, ಮದುವೆಯಾಗಿದ್ದು ಮೋದಿಯವರನ್ನು’ ಎಂದು ಲಘು ಹಾಸ್ಯದಲ್ಲಿ ಹೇಳಿದ್ದು ಹಾಗೂ ಅದನ್ನು ಮೋದಿಯವರು ನಗುತ್ತಲೇ ಆಸ್ವಾದಿಸಿದ್ದು. ಇದಕ್ಕೆ ದೇವೇಗೌಡರ ಪ್ರತಿಕ್ರಿಯೆಯೂ ಸದಭಿರುಚಿಯಿಂದ ಕೂಡಿದ್ದು ಖುಷಿ ಕೊಟ್ಟಿತು. ಎರಡನೆಯ ಆಹ್ಲಾದಕರ ಸುದ್ದಿ, ಖರ್ಗೆ, ದೇವೇಗೌಡ ಹಾಗೂ ಶರದ್ ಪವಾರ್ ಅವರು ತಮ್ಮ ಆಯುಷ್ಯದ ಅರ್ಧಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಕಳೆದಿದ್ದು, ಹೊಸಬರು ಅವರ ಸದ್ಗುಣಗಳ ಮಾದರಿಯನ್ನು ಅನುಸರಿಸಬೇಕೆಂದು ಮೋದಿಯವರು ಹೊಗಳಿರುವುದು. ಹಬ್ಬಲಿ ಈ ರಸಬಳ್ಳಿ.

-ಚಂದ್ರಶೇಖರ್, ಕಣಜನಹಳ್ಳಿ

ಮುದ್ದೇನಹಳ್ಳಿ: ಸೂಚನಾಫಲಕ ಅವಶ್ಯ

ಮುದ್ದೇನಹಳ್ಳಿಯಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಹಾಗೂ ಸಮಾಧಿ ಇದೆ. ಮುಖ್ಯರಸ್ತೆಯಲ್ಲಿ ನಾಮಫಲಕವಷ್ಟೇ ಇದ್ದು, ಅಲ್ಲಿಂದ ಸುಮಾರು 50 ಮೀಟರ್ ದೂರದಲ್ಲಿರುವ ಅಡ್ಡ ರಸ್ತೆಯ ಮೂಲಕ ಸಮಾಧಿ ಮತ್ತು ಮನೆಗೆ ಹೋಗಲು ಯಾವುದೇ ಮಾರ್ಗಸೂಚಿ ಫಲಕವಿಲ್ಲ. ವಾಹನಗಳಲ್ಲಿ ಬರುವ ಅನೇಕ ಪ್ರವಾಸಿಗರು ಮಾರ್ಗದರ್ಶನದ ಕೊರತೆಯಿಂದ ಸಮೀಪದ ಸ್ಕಂದಗಿರಿಯವರೆಗೆ ಹೋಗಿ ಮತ್ತೆ ಹಿಂದಿರುಗಿ ಬರುವ ಉದಾಹರಣೆಗಳಿವೆ. ಸೂಕ್ತ ಸ್ಥಳದಲ್ಲಿ ಸ್ಪಷ್ಟ ಮಾರ್ಗಸೂಚಿ ಫಲಕವನ್ನು ಸ್ಥಳೀಯ ಆಡಳಿತ ಅಳವಡಿಸಬೇಕು.

-ಜಿ. ನಾಗೇಂದ್ರ ಕಾವೂರು, ಸಂಡೂರು

ಡೇಟಾ ತೆರಿಗೆ, ಜನಸಾಮಾನ್ಯರ ಸುಲಿಗೆ

ಮೊಬೈಲ್ ಡೇಟಾ ಬಳಕೆಯ ಮೇಲೆ ಪ್ರತಿ ಜಿಬಿಗೆ ₹1 ತೆರಿಗೆ ವಿಧಿಸುವ ಸರ್ಕಾರದ ಪ್ರಸ್ತಾವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ನಿರ್ಧಾರ. ಈಗಾಗಲೇ ಟೆಲಿಕಾಂ ಸೇವೆಗಳ ಮೇಲೆ ಶೇ 18ರಷ್ಟು ಜಿಎಸ್ಟಿ ಇದೆ. ಭಾರತದಲ್ಲಿ ತಿಂಗಳಿಗೆ ಓರ್ವ ಬಳಕೆದಾರ ಸುಮಾರು 20 ಜಿಬಿ ಡೇಟಾ ಬಳಸುತ್ತಾನೆ. ಉದ್ದೇಶಿತ ತೆರಿಗೆಯಿಂದ ಸರ್ಕಾರಕ್ಕೆ ವಾರ್ಷಿಕ ₹22,900 ಕೋಟಿ ಆದಾಯ ಬರಬಹುದು. ಆದರೆ, ಇದರಿಂದ ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ; ಡಿಜಿಟಲ್ ಸಾಕ್ಷರತೆಗೆ ಅಡ್ಡಿಯಾಗಲಿದೆ.

-ವಿಜಯಕುಮಾರ ಎಚ್.ಕೆ., ರಾಯಚೂರು

ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ಸ್ವಾಗತಾರ್ಹ

ಶಿಕ್ಷಕಿಯರಿಗೆ ಶಿಶುಪಾಲನೆಗಾಗಿ 15 ದಿನಗಳ ಮುಂಚಿತ ರಜೆ ನೀಡುವ ಕ್ರಮ
ಪ್ರಶಂಸನೀಯ. ಶಿಕ್ಷಕಿಯರು ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸು ತ್ತಾರೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ಜವಾಬ್ದಾರಿಯ ಜೊತೆಗೆ ಕುಟುಂಬದ ಕರ್ತವ್ಯಗಳನ್ನೂ ನಿರ್ವಹಿಸುತ್ತಾರೆ. ತಾಯ್ತನದ ಸಮಯದಲ್ಲಿ ಅವರಿಗೆ ವಿಶ್ರಾಂತಿ ಮತ್ತು ಮಗುವಿನ ಆರೈಕೆಗಾಗಿ ಸಮಯ ದೊರಕುವುದು ಅಗತ್ಯ.ಈ ಹಿನ್ನೆಲೆಯಲ್ಲಿ ಮುಂಚಿತ ಶಿಶುಪಾಲನಾ ರಜೆ ಶಿಕ್ಷಕಿಯರಿಗೆ ನೆಮ್ಮದಿ ನೀಡುವ ಕ್ರಮವಾಗಿದೆ. ತಾಯಿ ಮತ್ತು ಮಗು ಆರೋಗ್ಯದ ದೃಷ್ಟಿಯಿಂದಲೂ ಇದು ಮಹತ್ವದ ನಿರ್ಧಾರವಾಗಿದೆ.

-ಸುಶ್ಮಿತಾ ಎಚ್., ಉಡುಪಿ.

ಶಿಕ್ಷಕಿಯರಿಗೆ ವಿಶೇಷ ರಿಯಾಯಿತಿ ಏಕೆ?

ಜನಗಣತಿ ಕಾರ್ಯದಿಂದ ಐವತ್ತು ವರ್ಷ ಮೀರಿದ ಶಿಕ್ಷಕಿಯರಿಗೆ ವಿನಾಯಿತಿ ನೀಡುವಂತೆ ಶಿಕ್ಷಣ ಇಲಾಖೆ ಸಂಬಂಧಪಟ್ಟವರನ್ನು ಕೋರಿದೆ. ಶಿಕ್ಷಕಿಯರ ಸಂಘದ ಮನವಿಯ ಮೇರೆಗೆ ಈ ಕೋರಿಕೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಕೆಲವು ವಿಶೇಷ ಸೌಲಭ್ಯಗಳನ್ನು ಮಹಿಳೆಯರಿಗೆ ಕೊಡುವುದು ತಪ್ಪಲ್ಲ. ಆದರೆ, ಆ ಸೌಲಭ್ಯಗಳು ಒಂದು ಮಿತಿಯನ್ನು ಮೀರಿದರೆ ಅವು ಸ್ವತಃ ಮಹಿಳೆಯರ ಘನತೆ, ಗೌರವ, ಕರ್ತೃತ್ವ ಶಕ್ತಿಗಳಿಗೆ ಧಕ್ಕೆ ತರುತ್ತವೆ. ಶಿಕ್ಷಕಿಯರು ಕೂಡ ಶಿಕ್ಷಕರು ಮತ್ತು ಇತರ ಇಲಾಖೆ ನೌಕರರಂತೆ 60 ವರ್ಷಕ್ಕೆ ನಿವೃತ್ತಿ ಹೊಂದುವವರು. ಅವರಿಗೆ ಹತ್ತು ವರ್ಷಗಳಷ್ಟು ವಿಶೇಷ ರಿಯಾಯಿತಿ ಕೊಡುವ ಅಗತ್ಯವೇನು? ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂದು ಸೂಚಿಸುವ ಯಾವ ತಪ್ಪು ನಿರ್ಧಾರಗಳನ್ನೂ ನಾವು ತೆಗೆದುಕೊಳ್ಳಬಾರದು. ಈ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ, ಐವತ್ತೈದು ವರ್ಷ ಮೀರಿದ ಯಾವುದೇ ನೌಕರರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಬಾರದು ಎಂದು ಕೋರಿದರೆ ನ್ಯಾಯಯುತ ನಿರ್ಧಾರ ಆಗುತ್ತದೆ.

-ರಾಜೇಂದ್ರ ಬುರಡಿಕಟ್ಟಿ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.