ಪಕ್ಷದ ರ‍್ಯಾಲಿ: ತ್ರಿವರ್ಣ ಧ್ವಜ ದುರ್ಬಳಕೆ ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್‌ನಲ್ಲಿ ಪ್ರಧಾನಿ ಮೋದಿ ಅವರ ಚುನಾವಣಾ ಪ್ರವಾಸದ ಸಂದರ್ಭದಲ್ಲಿ ರ‍್ಯಾಲಿ ಹೊರಡುವಾಗ, ಬಿಜೆಪಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಪ್ರಧಾನಿಗೆ ಜಯಘೋಷ ಕೂಗುತ್ತಿದ್ದರು. ಈ ರೀತಿ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿ ರಾಷ್ಟ್ರಧ್ವಜ ಬಳಸುವುದು ಸರಿಯೆ? ರಾಷ್ಟ್ರಧ್ವಜ ಹಿಡಿದು ಚುನಾವಣಾ ಪ್ರಚಾರಕ್ಕಾಗಿ ಬಂದ ಪಕ್ಷದ ನಾಯಕನ ಹೆಸರಿನಲ್ಲಿ ಜಯಘೋಷ ಕೂಗುವುದು ಸರಿಯಲ್ಲ. ರ‍್ಯಾಲಿ ಮುಗಿದ ಬಳಿಕ ಜನಜಂಗುಳಿಯ ನಡುವೆ ಕೆಲವು ರಾಷ್ಟ್ರಧ್ವಜಗಳು ರಸ್ತೆಯಲ್ಲೇ ಬಿದ್ದಿರುತ್ತವೆ. ರಾಜಕೀಯ ನಾಯಕರು ರ‍್ಯಾಲಿಗೆ ಆಗಮಿಸುವುದು ತಮ್ಮ ಪಕ್ಷದ ಪ್ರಚಾರ ಕ್ಕಾಗಿಯೇ ಹೊರತು ದೇಶ ಯುದ್ಧ ಗೆದ್ದ ಸಂಭ್ರಮ ಆಚರಿಸಲು ಅಲ್ಲ.