ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಸಲ್ಲ

ನ್ಯಾಯಕ್ಕಾಗಿ ನಾಗರಿಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ ರಾಜಕೀಯ ನಾಯಕರು ಅನವಶ್ಯಕವಾಗಿ ಮಧ್ಯಪ್ರವೇಶಿಸುತ್ತಾರೆ. ಈ ಹಸ್ತಕ್ಷೇಪವು ನ್ಯಾಯಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕಾದ ಸಂದರ್ಭದಲ್ಲಿ, ಹೊರಗಿನ ಒತ್ತಡಗಳಿಂದ ಅವರ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಕೆಲವೊಮ್ಮೆ ಈ ಪ್ರಭಾವದಿಂದ ಪ್ರಕರಣಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ತಿರುಗುವ ಸಾಧ್ಯತೆಯಿದೆ. ಇದು ಜನಸಾಮಾನ್ಯರಿಗೆ ನ್ಯಾಯದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ. ಇದಕ್ಕೆ ಧಾರವಾಡದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣ ನಿದರ್ಶನ. ಪ್ರಾರಂಭಿಕ ಹಂತದಲ್ಲಿ ಹಲವು ಗೊಂದಲ ಉಂಟಾದರೂ, ಕೊನೆಗೆ ನ್ಯಾಯ ದೊರೆತಿದೆ. ಠಾಣೆಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಟ್ಟುನಿಟ್ಟಾಗಿ ತಡೆಯಬೇಕಿದೆ. ಪೊಲೀಸರು ರಾಜಕೀಯ ನಾಯಕರ ಮರ್ಜಿಗೆ ಒಳಗಾಗದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ.

⇒ಪ್ರದೀಪ ಬಿಸಲನಾಯಿಕ, ಚಿಕ್ಕೋಡಿ

‘ಆರೋಗ್ಯ ಭಾಗ್ಯ’ಕ್ಕೆ ಗ್ಯಾರಂಟಿ ದೊರೆಯಲಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನು ಖಾಲಿಯಾಗಿರುವುದು ‘ಪ್ರಜಾವಾಣಿ’ಯ ರಿಯಾಲಿಟಿ ಚೆಕ್ನಿಂದ ಬಯಲಾಗಿದೆ (ಪ್ರ.ವಾ., ಏ. 22). ಜೀವನದಲ್ಲಿ ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ ಅಂತಿಮವಾಗಿ ಉತ್ತಮ ಆರೋಗ್ಯ ಇಲ್ಲದಿದ್ದರೆ ಅದು ನಶ್ವರ. ಸರ್ಕಾರಿ ಆಸ್ಪತ್ರೆಗಳನ್ನು ಅತಿ ಹೆಚ್ಚು ಅವಲಂಬಿಸಿರುವುದು ದೀನದಲಿತರು, ಕಾರ್ಮಿಕರು, ಮಹಿಳೆಯರು. ಬಡವರಿಗೆ ಕನಿಷ್ಠ ಆರೋಗ್ಯದ ಅವಶ್ಯಕತೆಯ ಮೇಲ್ವಿಚಾರಣೆ ಮಾಡಿ ಔಷಧಗಳನ್ನು ಒದಗಿಸು ವುದರಲ್ಲಿ ಸರ್ಕಾರ ಸೋತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರವು ‘ಆರೋಗ್ಯ ಭಾಗ್ಯ’ದ ಗ್ಯಾರಂಟಿಯನ್ನು ನೀಡಬೇಕಿದೆ.

⇒ಹೆಂದೊರೆ ಸಂಜು, ಶಿರಾ

ಗೃಹ ಸಚಿವರ ಬೆಟ್ಟಿಂಗ್ ತಮಾಷೆಯಲ್ಲ!

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯು ಶುರುವಾಗುವ ಮೊದಲೇ ಪೊಲೀಸ್ ಇಲಾಖೆ ಬೆಟ್ಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತ್ತು. ಬೆಟ್ಟಿಂಗ್ ಆಡುವುದು ಅಪರಾಧ. ಇದು ಬದುಕನ್ನು ಅವನತಿಗೆ ದೂಡುತ್ತದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ ತುಮಕೂರಿನಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ್ದ ಗೃಹ ಸಚಿವ
ಜಿ. ಪರಮೇಶ್ವರ ಅವರು, ದಕ್ಷಿಣ ಕನ್ನಡ ಜಿಲ್ಲಾ ತಂಡದ ವಿರುದ್ಧ ₹500 ಬೆಟ್ಟಿಂಗ್ ಕಟ್ಟಿದ್ದರು. ಈ ಬಗ್ಗೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಕೊನೆಗೆ, ಖಾಸಗಿ ದೂರು ಸ್ವೀಕರಿಸಿದ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದೆ. ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಕೋರರ ಹಾವಳಿ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕುವುದು ಪೊಲೀಸರ ಹೊಣೆಗಾರಿಕೆ. ಆದರೆ, ಗೃಹ ಸಚಿವರೇ ಬೆಟ್ಟಿಂಗ್ ಆಡಿದರೆ ನಾಗರಿಕರು ಪೊಲೀಸರ ಮಾತು ಕೇಳುತ್ತಾರೆಯೇ?

⇒ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ

ನಾಯಕರಿಗೆ ‘ಹೃದಯಪರೀಕ್ಷೆ’ಯ ಕಾಲ

ಈಗ ನಮಗೆ ನಿಜವಾಗಿಯೂ ಬೇಕಿರುವುದು ಹೃದಯವಂತಿಕೆಯ ನಾಯಕತ್ವ. ಎಲ್ಲೆಲ್ಲೂ ಯುದ್ಧ ನಡೆಯುತ್ತಿರುವುದರಿಂದ ಜನಸಾಮಾನ್ಯರು ದಣಿದಿದ್ದಾರೆ. ಹಾಗಾಗಿ, ನಮ್ಮ ನಾಯಕರು ಕನಿಷ್ಠ ಹೃದಯವಂತಿಕೆ ತೋರಬೇಕಿದೆ. ಆದರೆ, ವಿಶ್ವನಾಯಕರೆನಿಸಿಕೊಂಡ ಅನೇಕರು ನಡೆದುಕೊಳ್ಳುವ ರೀತಿಯು ಅಸಹ್ಯ ಹುಟ್ಟಿಸುತ್ತದೆ. ಅಧಿಕಾರಕ್ಕೇರಿದ ಕೂಡಲೇ ಅಹಂಕಾರದಿಂದ ವರ್ತಿಸುವುದು, ಇತರರನ್ನು ಕೀಳಾಗಿ ಕಾಣುವುದು ಸಹಜ ಗುಣವಾಗಿ ಬಿಡುವುದು ವಿಚಿತ್ರವಾದರೂ ನಿಜವೇ. ಸದ್ಯದ ಪರಿಸ್ಥಿತಿಯಲ್ಲಿ ಈ ನಾಯಕರು ತಮ್ಮ ವಿಚಿತ್ರ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು; ತಮಗೂ ಜನರಿಗಾಗಿ ಮಿಡಿಯುವ ಹೃದಯ ಮತ್ತು ಮನಸ್ಸು ಇದೆಯೆಂದು ತೋರಿಸಿಕೊಡುವ ಕಾಲ ಬಂದಿದೆ. ಈ ಸತ್ಯ ಅರಿಯುವ ಸದ್ಬುದ್ಧಿ ಎಲ್ಲಾ ಹೃದಯವಂತ ನಾಯಕರಿಗೆ ಬಂದರಷ್ಟೇ ವಿಶ್ವಕ್ಕೆ ಉಳಿಗಾಲ.

⇒ವಾಸಣ್ಣ, ಧಾರವಾಡ

ಯುವಶಕ್ತಿ ಸದ್ಬಳಕೆ: ಅಭಿವೃದ್ಧಿಗೆ ಪೂರಕ

ದೇಶದಲ್ಲಿ 37 ಕೋಟಿ ಯುವಜನರಿದ್ದಾರೆ. ಈ ಯುವಶಕ್ತಿ ಸದ್ಬಳಕೆಯಾದರೆ ಭಾರತವು ವಿಶ್ವದ ಸುಸ್ಥಿರ ಅಭಿವೃದ್ಧಿಯ ನಾಯಕನಾಗುವುದರಲ್ಲಿ ಅನುಮಾನವಿಲ್ಲ. ಈಗಿರುವ ಭ್ರಷ್ಟ ನಾಯಕತ್ವ ಬೇಡ. ತಮ್ಮ ಕುಟುಂಬ ಮತ್ತು ಭಾರತವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಯುವಶಕ್ತಿ ಬೇಕಿದೆ. ಉತ್ತಮ ಚಾರಿತ್ರ್ಯ ಬೆಳೆಸಿಕೊಳ್ಳದ ಯುವಜನರು ಮೊಬೈಲ್, ಮೋಜುಮಸ್ತಿಯಲ್ಲಿ ಕಳೆದುಹೋಗ ದಿರಲಿ. ತಮ್ಮ ಜವಾಬ್ದಾರಿ ಅರಿತು ಕುಟುಂಬ ಮತ್ತು ದೇಶವನ್ನು ಸನ್ಮಾರ್ಗದಲ್ಲಿ ನಡೆಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಸಮರ್ಥನೀಯ.

⇒ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ಕೊರತೆ ಆಗರ: ದಾಖಲೆಯ ಫಲಿತಾಂಶ

ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ದಾಖಲೆಯ ಶೇ 94.1ರಷ್ಟು ಬಂದಿದೆ. ಅನುತ್ತೀರ್ಣಗೊಂಡ ಮಕ್ಕಳೇ ನತದೃಷ್ಟರು. ಒಂದೇ ವರ್ಷದಲ್ಲಿ ನಾಡಿನ ಮಕ್ಕಳು ಜಾಣರಾಗಿ ಬಿಟ್ಟರು. ಶಿಕ್ಷಣ ಇಲಾಖೆಯು ಮಕ್ಕಳನ್ನು ಹಲವಾರು ಉಪಕ್ರಮಗಳ ಮೂಲಕ ಜಾಣರನ್ನಾಗಿ ಮಾಡಿಬಿಟ್ಟಿದೆ. ಶಿಕ್ಷಕರ ಕೊರತೆ, ಸೌಲಭ್ಯದ ಕೊರತೆಯಿದ್ದಾಗಿಯೂ ಅಪೂರ್ವ ಸಾಧನೆ ಇದು. ಮುಂಬರುವ ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಬರುವ ರೀತಿ ಇನ್ನಷ್ಟು ವಿದ್ಯಾರ್ಥಿಸ್ನೇಹಿ ಅಥವಾ ಫಲಿತಾಂಶ ಪೂರಕ ಸಿದ್ಧಮಾದರಿಗಳು, ಉಪಕ್ರಮಗಳನ್ನು ರೂಪಿಸಿ ಮುಂಚಿತವಾಗಿಯೇ ಬಿಡುಗಡೆ ಮಾಡಲಿ. ಆಗ ‘ಎಸ್ಎಸ್ಎಲ್ಸಿ ಪಾಸಾದೆ’ ಅನ್ನುವ ಸಂಭ್ರಮ ಎಲ್ಲ ಮಕ್ಕಳದ್ದಾಗಬಹುದು. ಸರ್ಕಾರ ಕೂಡ ನೂರಕ್ಕೆ ನೂರರಷ್ಟು ಫಲಿತಾಂಶದ ಬಗ್ಗೆ ಬೀಗಬಹುದು.

ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.