ಪ್ರಧಾನಿಯ ಸಂಕಟ ಭಾಷಣದ ಪ್ರಹಸನ

ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ನಲ್ಲಿ ಸೋಲಾದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಕ್ಷಮೆ ಕೋರಿದ್ದು ವಿಚಿತ್ರವೆನಿಸಿತು. ಬಹುಶಃ ಇತ್ತೀಚಿನ ದಿನಗಳಲ್ಲಿ ಒಂದು ಮಸೂದೆಯನ್ನು ಸಂಸತ್ನಲ್ಲಿ ಚರ್ಚೆಗೊಳಪಡಿಸಿದ್ದು ಇದೊಂದೇ ಇರಬೇಕು. ಮಧ್ಯಾಹ್ನ
ಮಸೂದೆ ಮಂಡಿಸಿ, ಸಂಜೆಯೊಳಗೆ ಪಾಸ್ ಮಾಡಿಸಿ, ಮಧ್ಯರಾತ್ರಿ ರಾಷ್ಟ್ರಪತಿಯಿಂದ ಒಪ್ಪಿಗೆ ಪಡೆದ ಉದಾಹರಣೆ ಬೇಕಾದಷ್ಟಿವೆ. ಚರ್ಚೆಗೆ ಅವಕಾಶ ಸಿಕ್ಕಿದಾಗ ಮಸೂದೆಗೆ ಸೋಲಾಯಿತು; ಕೇಂದ್ರದ ನಿಜ ಉದ್ದೇಶವೂ ಬಯಲಾಯಿತು. ‘ಮನರೇಗಾ’ ಸ್ಥಗಿತದಿಂದಾಗಿ ಮಹಿಳೆಯರು ಮಕ್ಕಳನ್ನು ಕಟ್ಟಿಕೊಂಡು ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ರಾತ್ರೋರಾತ್ರಿ ಪಾಸಾದ ‘ವಿಬಿ–ಜಿ ರಾಮ್ ಜಿ’ ಕಾನೂನಿ
ನಿಂದ ತಮ್ಮೂರಿನ ಸುರಕ್ಷಿತ ವಾತಾವರಣದಲ್ಲಿ ಉದ್ಯೋಗ ಕಳೆದುಕೊಂಡ ಆ ಮಹಿಳೆಯರ ಕ್ಷಮೆಯನ್ನೂ ಪ್ರಧಾನಿ ಕೇಳಬೇಕಲ್ಲವೇ?

⇒ಶಾರದಾ ಗೋಪಾಲ, ಧಾರವಾಡ

ಬಡ ಕಾರ್ಮಿಕರ ಜೀವಗಳಿಗೆ ಬೆಲೆ ಇಲ್ಲವೆ ?

ತಮಿಳುನಾಡಿನ ಕಟ್ಟನಾರಪಟ್ಟಿ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿನ ಸ್ಫೋಟಕ್ಕೆ 23ಕ್ಕೂ ಹೆಚ್ಚು ಕಾರ್ಮಿಕರು ಬಲಿಯಾಗಿದ್ದಾರೆ. ಈ ಸುದ್ದಿ ನಮಗೆ ಹೊಸತಲ್ಲ, ಪ್ರತಿವರ್ಷದ್ದು. ಬಹುತೇಕ ಪಟಾಕಿ ತಯಾರಿಕಾ ಕಾರ್ಖಾನೆಗಳು ತಮಿಳುನಾಡಿನಲ್ಲಿ ಇವೆ. ದೇಶದಲ್ಲಿ ಯಾವುದೇ ವಿದ್ಯಮಾನಗಳನ್ನು ಮೊಟ್ಟಮೊದಲು ಪ್ರತಿಭಟಿಸುವವರು ಈ ರಾಜ್ಯದವರೇ. ಪ್ರತಿವರ್ಷವೂ ಬಲಿಯಾಗುತ್ತಿರುವ ತಮ್ಮವರೇ ಆದ ಬಡವರಿಗಾಗಿ ಈ ಜನರೇಕೆ ಪ್ರತಿಭಟಿಸುತ್ತಿಲ್ಲ? ನಾವೂ ಏಕೆ ಪ್ರತಿಭಟಿಸಬಾರದು? ಬಡವರ, ದಲಿತರ, ಮಹಿಳೆಯರ ಮತ್ತು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೆಂದೆ? ನಮ್ಮೆಲ್ಲರ ಈ ನಿರ್ಲಕ್ಷ್ಯವು ಕ್ರೂರ ಹಾಗೂ ಅಕ್ಷಮ್ಯವಾದುದು.

⇒ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಬಾನುಲಿ ಸುದ್ದಿ ವಿಭಾಗ ಸ್ಥಳಾಂತರ ಬೇಡ

ಧಾರವಾಡ ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗವನ್ನು ಮೇ 15ರಿಂದ ಬೆಂಗಳೂರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ದೆಹಲಿಯ ಪ್ರಸಾರ ಭಾರತಿ ನಿರ್ಧರಿಸಿದೆ. ಇದು ಉತ್ತರ ಕರ್ನಾಟಕದವರಿಗೆ ಆಘಾತ ತಂದಿದೆ. ಕಳೆದ 44 ವರ್ಷಗಳಿಂದ ಜನಪ್ರಿಯವಾಗಿರುವ ಬೆಳಗಿನ 7:05ರ ಪ್ರದೇಶ ಸಮಾಚಾರವು ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದ ಜನನಾಡಿ ಆಗಿದೆ. ಆದಾಯದ ದೃಷ್ಟಿಯಿಂದಲೂ ಈ ವಿಭಾಗ ಉತ್ತಮ ಕೊಡುಗೆ ನೀಡುತ್ತಿದೆ. ಇದನ್ನು ಕಸಿದು ಬೆಂಗಳೂರಿಗೆ ಸ್ಥಳಾಂತರಿಸಿದರೆ ಪ್ರಾದೇಶಿಕ ಸೊಗಡು, ವಿಷಯ ವೈವಿಧ್ಯಕ್ಕೆ ಧಕ್ಕೆಯಾಗಲಿದೆ. ತಾತ್ಕಾಲಿಕವಾಗಿ ಸ್ಥಳಾಂತರಿಸುವ ನಿರ್ಧಾರದ ಹಿಂದೆ ಧಾರವಾಡ ಕೇಂದ್ರವನ್ನು ಮುಚ್ಚುವ ಹುನ್ನಾರದ ವಾಸನೆಯೂ ಬಡಿಯುತ್ತಿದೆ.

⇒ರವೀಂದ್ರ ಆಕಳವಾಡಿ, ಉದಯ ಮ. ಯಂಡಿಗೇರಿ, ಧಾರವಾಡ

ಸುಭದ್ರ ಪ್ರಾದೇಶಿಕ ಪಕ್ಷ ಗಗನಕುಸುಮ

‘ಬಿಜೆಪಿ ಜತೆ ಮೈತ್ರಿಯಷ್ಟೇ, ಸಿದ್ಧಾಂತದಲ್ಲಿ ರಾಜಿ ಇಲ್ಲ. ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿಯಲಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಮಾತು ‘ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ’ ಎಂಬ ಗಾದೆಯನ್ನು ಹೋಲುತ್ತಿದೆಯಾದರೂ, ಮೈತ್ರಿಯಲ್ಲಿನ ಅಸಮಾಧಾನದ ಹೊಗೆ ಹೊರಸೂಸುವಂತಿದೆ. ಕರ್ನಾಟಕಕ್ಕೆ ತನ್ನದೇ ಆದ ಪ್ರಾದೇಶಿಕ ಪಕ್ಷ ಇಲ್ಲದಿರುವುದು ಕನ್ನಡಿಗರ ಅನಿಷ್ಟಗಳಿಗೆ ಕಾರಣ. ಜೆಡಿಎಸ್ ಆ ಕೊರತೆ ತುಂಬಬಹುದೆಂಬ ನಿರೀಕ್ಷೆ ಇತ್ತು. ಈಗಲಾದರೂ ಜೆಡಿಎಸ್ ತನ್ನ ಹೆಸರಿಗೆ ಅನ್ವರ್ಥ ಎನ್ನುವಂತೆ ಅಪವಿತ್ರ ಮೈತ್ರಿ ಕಳಚಿಕೊಂಡು ಜಾತ್ಯತೀತವೂ, ಸುಭದ್ರ ಪ್ರಾದೇಶಿಕ ಪಕ್ಷವೂ ಆಗಿ ಹೊರಹೊಮ್ಮುವುದೆಂದು ಕನ್ನಡಿಗರು ಎದುರುನೋಡಬಹುದೆ?

⇒ಪು.ಸೂ. ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಭೂಮಿ–ಮೋಜಣಿ ತಂತ್ರಾಂಶ ದೋಷ

‘11ಇ’ ವಹಿವಾಟು ಪೂರ್ವ ನಕ್ಷೆಯಾಗಿದೆ. ಇದರಡಿ ವಿವಿಧ ವಹಿವಾಟು ನೋಂದಣಿಯಾದ ಬಳಿಕ ಸ್ವಯಂಚಾಲಿತವಾಗಿ ಮ್ಯೂಟೇಶನ್ ಮತ್ತು ಪಹಣಿಯಲ್ಲಿ ಖಾತೆ ಬದಲಾವಣೆಯಾಗುತ್ತದೆ. ಆದರೆ, ಹಕ್ಕು ಬದಲಾವಣೆಯ ಬಳಿಕವೂ ಪಹಣಿಯಲ್ಲಿ ಬಹುಮಾಲೀಕತ್ವ ಮುಂದುವರಿಯುತ್ತಿದೆ. ಕಾಲಮಿತಿಯೊಳಗೆ ಪಹಣಿ ಏನೋ ಕಾಲೋಚಿತಗೊಳ್ಳುತ್ತಿದೆ. ಆದರೆ, ಭೂಮಾಪನ ಇಲಾಖೆಯಲ್ಲಿ ಐಎಂಪಿಯಾಗಿ ಹೊಸ ಹಿಸ್ಸಾ ನಂಬರ್ ಸೃಜನೆ ಮತ್ತು ತಾಲ್ಲೂಕು ಭೂ ಮಾಪನ ಇಲಾಖೆಯ ಸಹಾಯಕರು ನಮೂನೆ 10ಕ್ಕೆ ಅನುಮೋದನೆ ನೀಡಿದರೂ ಅದು ‘ಭೂಮಿ’ ತಂತ್ರಾಂಶದಲ್ಲಿ ಸಂಯೋಜನೆಗೊಂಡು ಹೊಸ ಹಿಸ್ಸಾ ನಂಬರಿನೊಂದಿಗೆ ಪಹಣಿ ಸೃಜನೆಯಾಗುತ್ತಿಲ್ಲ. ಇದು ‘ಭೂಮಿ’ ಮತ್ತು ಮೋಜಣಿ ತಂತ್ರಾಂಶದ ತಾಂತ್ರಿಕ ಸಂಯೋಜನೆಯ ದೋಷವೆಂದು ಹೇಳಲಾಗುತ್ತಿದೆ. ಫೆಬ್ರುವರಿಯಿಂದ ಈ ಸಮಸ್ಯೆ ಎದುರಾಗಿದೆ. ಕಂದಾಯ ಸಚಿವರು ಇದನ್ನು ಬಗೆಹರಿಸಲು ಕ್ರಮವಹಿಸಬೇಕಿದೆ.

⇒ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ

ಕೇಂದ್ರ ಸಂಪುಟ: ಮೀಸಲು ಏಕಿಲ್ಲ?

ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾಗಲಿದೆ ಎಂಬ ಅರಿವಿದ್ದರೂ ಕೇಂದ್ರ ಸರ್ಕಾರವು ಅದನ್ನು ಸಂಸತ್ನಲ್ಲಿ ಮಂಡಿಸಿತು. ಈ ಸೋಲಿಗೆ ವಿರೋಧ ಪಕ್ಷದವರೇ ಕಾರಣವೆಂದು ದೂರುತ್ತಿದೆ. ನರೇಂದ್ರ ಮೋದಿ ಮುಂದಾಳತ್ವದ ಸಚಿವ ಸಂಪುಟದಲ್ಲಿ 71 ಸಚಿವರಿದ್ದಾರೆ. ಈ ಪೈಕಿ ಏಳು ಮಹಿಳೆಯರಿಗಷ್ಟೆ ಸಚಿವ ಸ್ಥಾನ ನೀಡಲಾಗಿದೆ. ಸಂಪುಟದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮೂಲಕ ಬಿಜೆಪಿಯು, ವಿಪಕ್ಷಗಳಿಗೆ ಮಾದರಿಯಾಗಬೇಕಿದೆ. ಮತ್ತೊಂದೆಡೆ, ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸುವುದನ್ನು ತಾನು ಒಪ್ಪುವುದಿಲ್ಲವೆಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ. ಈಗ ವಿಪಕ್ಷದವರ ಮೇಲೆ ವಿನಾಕಾರಣ ಬೊಬ್ಬೆ ಹಾಕುತ್ತಿರುವುದನ್ನು ನೋಡಿದರೆ ಅದರ ನಡೆಯು ‘ತಾನು ಕಳ್ಳ, ಪರರ ನಂಬ’ ಎಂಬಂತಿದೆ.

ಚಿ. ಉಮಾ ಶಂಕರ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.