ವಿಶ್ವಾಸ ಉಳಿಸಿಕೊಳ್ಳುವುದೇ ವಿಶ್ವಸಂಸ್ಥೆ?

ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಕಬಂಧಬಾಹುಗಳು ಚಾಚಿಕೊಂಡಿವೆ. ಆ ದೇಶಗಳ ಮೂಲಸೌಕರ್ಯದ ವ್ಯವಸ್ಥೆ, ಜನವಸತಿ ಪ್ರದೇಶ, ತೈಲ ಮತ್ತು ಅನಿಲ ಸಂಸ್ಕರಣೆ ಘಟಕ, ವಿಮಾನ ನಿಲ್ದಾಣ, ಶಾಲೆ, ಹಡಗು, ರೈಲು ನಿಲ್ದಾಣಗಳ ಮೇಲೆ ಬಾಂಬ್ ದಾಳಿ ನಡೆಯುತ್ತಿದೆ. ನೂರಾರು ಜನರು ಅಸುನೀಗಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ನ ರಕ್ತಪಿಪಾಸುತನವೇ ಈ ಯುದ್ಧಕ್ಕೆ ಕಾರಣ. ಯುದ್ಧವು ಜಗತ್ತಿನ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.

ಕಚ್ಚಾತೈಲ ದುಬಾರಿ ಆಗಲಿದೆ. ಈ ಯುದ್ಧ ನೋಡಿದಾಗ ವಿಶ್ವಸಂಸ್ಥೆ ಅಸ್ತಿತ್ವದಲ್ಲಿ ಇದೆಯೇ ಎಂಬ ಅನುಮಾನ ಯಾರನ್ನಾದರೂ ಕಾಡದಿರದು. ಯುದ್ಧದಂಥ ಭೀಕರ ಸಮಸ್ಯೆಯಿಂದಾಗಿ ಇಡೀ ಮನುಕುಲವೇ ಸಂಕಷ್ಟಕ್ಕೆ ಸಿಲುಕಿರುವಾಗ ವಿಶ್ವಸಂಸ್ಥೆಯ ಮೌನದ ಹಿಂದಿನ ಮರ್ಮವಾದರೂ ಏನು?

– ಸುರೇಶ ಮಂಜರಗಿ, ಸಂಕೇಶ್ವರ

ಎಸ್ಸೆಸ್ಸೆಲ್ಸಿ ಪರೀಕ್ಷಾ ಒತ್ತಡದ ಆಗುಹೋಗು

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಶತಾಯಗತಾಯ ಶೇ 100ರಷ್ಟು ಗುರಿ ಸಾಧಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಹಲವು ಕಸರತ್ತು ನಡೆಸುತ್ತಿದೆ. ಆದರೆ, ಇಲಾಖೆಯ ನಡೆಯು ಪೋಷಕರು, ಶಿಕ್ಷಕರು ಮತ್ತು ಶಿಕ್ಷಣಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಿಸಿದೆ. ಅಂತಿಮವಾಗಿ ಮಕ್ಕಳ ಮನಃಸ್ಥಿತಿಯ ಮೇಲೂ ಅಗಾಧ ಪರಿಣಾಮ ಬೀರುತ್ತದೆ. ಮಕ್ಕಳ ಅಂಕಗಳಿಕೆಗೆ ಹಾಗೂ ಶಾಲೆಯ ಫಲಿತಾಂಶ ಹೆಚ್ಚಳಕ್ಕೆ ಒತ್ತಡ ಹಾಕುವುದು ಸರ್ವಥಾ ಸರಿಯಲ್ಲ. ಶಿಕ್ಷಕರು ಒತ್ತಡರಹಿತವಾಗಿ ಬೋಧಿಸಲು ಹಾಗೂ ಮಕ್ಕಳು ಸುಲಲಿತವಾಗಿ ಕಲಿಯಲು ಸೂಕ್ತ ಮಾರ್ಗೋಪಾಯ ಕಂಡುಕೊಳ್ಳುವುದು ಇಲಾಖೆಯ ಹೊಣೆಯಾಗಿದೆ.

– ಸಿದ್ದೇಶ ಅಶೋಕ ಚನ್ನಳ್ಳಿ, ಹಿರೇಕೆರೂರು

ಜಲಪಾತ್ರೆ ಬರಿದು; ಜಲಕ್ಷಾಮದ ದಿಗಿಲು

ರಾಜ್ಯದಲ್ಲಿ ಬೇಸಿಗೆಯ ಬಿಸಿ ಏರುತ್ತಿದ್ದು ಕುಡಿಯುವ ನೀರಿನ ಕೊರತೆ ತಲೆದೋರು ತ್ತಿದೆ. ಈ ಜಲದಾಹ ತೀರಿಸಲು ಹೆಚ್ಚು ಹೆಚ್ಚು ಕೊಳವೆಬಾವಿ ಕೊರೆಸುವ ಸರ್ಕಾರದ ತೀರ್ಮಾನ ಇನ್ನಷ್ಟು ಆತಂಕ ಸೃಷ್ಟಿಸಿದೆ (ಪ್ರ.ವಾ., ಮಾ. 3). ನೀರು ಬೇಕು ಅನ್ನಿಸಿದಾಗ ಕೊಳವೆಬಾವಿ ಕೊರೆಯುವುದು ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿ ದಂತಲ್ಲವೆ? ವಾತಾವರಣ ವೈಪರೀತ್ಯದ ಈ ದಿನಗಳಲ್ಲಿ ತೀವ್ರ ಮಳೆಯೂ, ಜಲಕ್ಷಾಮವೂ ನಿರೀಕ್ಷಿತವೇ.

ಜಲಕ್ಷಾಮದ ನಿರೀಕ್ಷೆಯಲ್ಲಿ ಮಳೆನೀರಿನ ಸಂಗ್ರಹ, ಬಾವಿಗಳ ಜಲಮರುಪೂರಣಕ್ಕೆ ಹೆಚ್ಚು ಗಮನಹರಿಸಿ ಕೆಲಸ ಮಾಡಬೇಕಿತ್ತು. ಹವಾನಿಯಂತ್ರಿತ ಕೊಠಡಿ ಯಲ್ಲಿ ಕುಳಿತು ಜಗತ್ತನ್ನು ನೋಡುವ ಅಧಿಕಾರಿಗಳಿಗೆ ಜಲಮರುಪೂರಣ ದಂತಹ ವಿಚಾರಗಳು ಹೊಳೆಯುವುದಿಲ್ಲ. ಭೂಮಿಯೊಳಗಿನ ಜಲಪಾತ್ರೆ ಖಾಲಿ ಆಗಿದೆ. ಖಾಲಿ ಆದುದನ್ನು ನಾವು ತುಂಬಿಲ್ಲ. ಈಗ ಜಲಕ್ಷಾಮ ಉಂಟಾದಾಗ ಮತ್ತೆ ಕೊಳವೆ ಬಾವಿ ಕೊರೆಯುವ ವಿಚಾರ ಮಾಡುವ ಅಧಿಕಾರಿಗಳಿಗೆ ಏನನ್ನೋಣ?

– ಶಾರದಾ ಗೋಪಾಲ, ಧಾರವಾಡ

ಜಾತ್ರೆ, ಉತ್ಸವಕ್ಕೂ ರಾಜಕೀಯ ನಂಟು!

ಇತ್ತೀಚೆಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ರಾಜಕೀಯ ನುಸುಳುತ್ತಿದೆ. ಮತೀಯವಾದಿ ಗಳು ಪ್ರತಿ ವಿಷಯದಲ್ಲೂ ರಾಜಕೀಯ ಪಕ್ಷವನ್ನು ಮುನ್ನೆಲೆಗೆ ತರಲು ಪ್ರಯತ್ನಿಸು ವುದು ಅವ್ಯಾಹತವಾಗಿದೆ. ಸ್ವಪ್ರತಿಷ್ಠೆಗಾಗಿ ಧಾರ್ಮಿಕ ಸ್ಥಳ, ಉತ್ಸವ, ಜಾತ್ರೆಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ಜಾತ್ರೆ, ಉತ್ಸವವು ಒಬ್ಬ ವ್ಯಕ್ತಿ, ಪಕ್ಷ, ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರನ್ನೂ ಒಳಗೊಳ್ಳುವುದೇ ಅವುಗಳ ಶಕ್ತಿ. ಇಂತಹವುಗಳು ರಾಜಕೀಯ ಕೆಸರೆರಚಾಟ, ಬಲ ಪ್ರದರ್ಶನಕ್ಕೆ ವೇದಿಕೆಯಾಗಬಾರದು. ಜನರ ಧಾರ್ಮಿಕ, ಆಧ್ಯಾತ್ಮಿಕ ಭಾವನೆ ಗಳಿಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ.

– ಕಿರಣ್ ಹೂಗಾರ್ ಹೆಬ್ಬಳ್ಳಿ, ಧಾರವಾಡ

ಸೆಟ್ಬ್ಯಾಕ್: ದಂಡ ಕಟ್ಟಿದರೆ ಸಕ್ರಮವೆ?

ಕಟ್ಟಡಗಳ ಸೆಟ್ಬ್ಯಾಕ್ ಉಲ್ಲಂಘನೆ ವಿನಾಯಿತಿಯನ್ನು ಶೇ 5ರಿಂದ ಶೇ 15ಕ್ಕೆ ವಿಸ್ತರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ (ಪ್ರ.ವಾ., ಮಾ. 4). ಈಗ ನಿರ್ಮಾಣ ಆಗುತ್ತಿರುವ ಮತ್ತು ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಐದು ಸಾವಿರ ಚದರ ಅಡಿ ನಿವೇಶನದ ಕಟ್ಟಡಗಳಿಗೆ ಇದು ಅನ್ವಯವಾಗಲಿದೆ.

ದಂಡ ಕಟ್ಟಿದರೆ ಸಕ್ರಮ ಆಗುವ ಹಾಗೆ ಮಾಡಿದರೆ ಪ್ರಯೋಜನವೇನು? ಹಣ ಇರು ವವರು ಉಲ್ಲಂಘನೆ ಮಾಡಿಯೇ ತೀರುತ್ತಾರೆ. ಹಾಗಾದರೆ ನಿಯಮ ಇರುವುದು ಏತಕ್ಕೆ? ಈ ಉಲ್ಲಂಘನೆ ನಿಯಮವನ್ನು ಈಗಾಗಲೇ ನಿರ್ಮಾಣ ಆಗುತ್ತಿರುವ ಕಟ್ಟಡಗಳಿಗಷ್ಟೆ ಅನ್ವಯಿಸುವುದು ಸೂಕ್ತ. ಇಲ್ಲವಾದಲ್ಲಿ ನಿಯಮ ಎಂಬುದಕ್ಕೆ ಅರ್ಥವೇ ಇರದು.

– ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಕಸಾಪ ಅಧ್ಯಕ್ಷ ಅವಧಿ 3 ವರ್ಷ ಸಾಕು

ಸಾಹಿತಿಗಳಲ್ಲದ, ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡದಿರುವ ಆಸಕ್ತಿಯಷ್ಟೇ ಇರುವ ನಿವೃತ್ತ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಬರಲು ಪ್ರಾರಂಭಿಸಿದ ಮೇಲೆ ಪರಿಷತ್ತು ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಾ ಬಂದಿದೆ. ಅಧ್ಯಕ್ಷರಾಗಿ ಗೆದ್ದು ಬಂದವರು, ಅಧ್ಯಕ್ಷ ಸ್ಥಾನವನ್ನು ಐದು ವರ್ಷಗಳವರೆಗೆ ರಾಜಕೀಯ ನೆಲೆಯನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.

ಸಾಂಸ್ಕೃತಿಕ ಸಂಘಟನೆಗಳಿಗೆ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷ ಸಾಕು. ಇತ್ತೀಚೆಗೆ ಕಸಾಪದಲ್ಲಿ ಸಾಧನೆಗಿಂತ ಅಬ್ಬರವೇ ಜೋರಾಗಿದೆ. ಮನಸೋಇಚ್ಛೆ ಬೈಲಾ ಬದಲಿಸಿಕೊಳ್ಳಲಾಗಿದೆ. ಆ ವಿವಾದಾತ್ಮಕ ಬೈಲಾವನ್ನು ಹಿಂತೆಗೆದುಕೊಂಡು, ಈ ಹಿಂದೆ ಇದ್ದ ಹಳೆಯ ಬೈಲಾವನ್ನೇ ಉಳಿಸಿಕೊಂಡು, ಮೂರು ವರ್ಷದ ಅವಧಿಗಾಗಿ ಪರಿಷತ್ತಿಗೆ ಚುನಾವಣೆ ನಡೆಯಲು ಅನುಕೂಲವಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳುವುದು ಸೂಕ್ತ.

– ತಾ.ಸಿ. ತಿಮ್ಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.