ಭವಿಷ್ಯ ನಿಧಿ: ಬಡ್ಡಿ ಪಾವತಿ ವಿಳಂಬವೇಕೆ?

ಈ ಹಿಂದೆ ಆಯಾ ತಿಂಗಳಲ್ಲೇ ನೌಕರರ ಭವಿಷ್ಯ ನಿಧಿ ಖಾತೆಯಲ್ಲಿನ ಉಳಿತಾಯದ ಹಣಕ್ಕೆ ಬಡ್ಡಿ ಸಂದಾಯವಾಗುತ್ತಿತ್ತು. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಸ್ಥಗಿತಗೊಂಡಿತು. ಆರ್ಥಿಕ ವರ್ಷದ ಅಂತ್ಯದಲ್ಲಿ ಬಡ್ಡಿ ಪಾವತಿ ಮಾಡುವ ಹೊಸ ಪದ್ಧತಿ ಜಾರಿಗೊಂಡಿತು. ಅದರಂತೆ ಕೆಲವು ವರ್ಷಗಳಿಂದ ಏಪ್ರಿಲ್ 1ರಂದು ಅರ್ಹರ ಖಾತೆಗೆ ಬಡ್ಡಿ ಜಮೆಯಾಗುತ್ತಿತ್ತು. ಈ ವರ್ಷ ಮೇ ತಿಂಗಳು ಮುಗಿಯುತ್ತಾ ಬಂದರೂ ಬಡ್ಡಿ ಜಮೆಯಾಗಿಲ್ಲ. ಹಳೆಯ ಪದ್ಧತಿಯಲ್ಲಿ ಪ್ರತಿ ತಿಂಗಳ ಬಡ್ಡಿ ಎಷ್ಟು ಬರಬೇಕೆಂದು ಚಂದಾದಾರರಿಗೆ ಸುಲಭವಾಗಿ ಲೆಕ್ಕ ಸಿಗುತ್ತಿತ್ತು. ಉಳಿತಾಯದ ಹಣಕ್ಕೆ ಸರ್ಕಾರ ನಿಗದಿಪಡಿಸುವ ಶೇಕಡಾವಾರು ಬಡ್ಡಿ ಹಣವನ್ನು ಗುಣಿಸಿ, ಈ ಮಾಸಿಕ ಇಷ್ಟೇ ಬಡ್ಡಿ ಬರುತ್ತದೆಂದು ಖಚಿತವಾಗಿ ಹೇಳಬಹುದಿತ್ತು. ಹೊಸ ಪದ್ಧತಿಯಡಿ ಪ್ರತಿ ತಿಂಗಳು ಸಂದಾಯವಾಗಬೇಕಿದ್ದ ಬಡ್ಡಿ ಮತ್ತು ಚಕ್ರಬಡ್ಡಿ ಸೇರಿಸಿ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂದು ಲೆಕ್ಕ ಹಾಕುವುದು ಕಷ್ಟಕರ ಆಗಿದೆ. ಹಳೆಯ ಮಾನದಂಡವನ್ನೇ ಅನುಸರಿಸಬೇಕಿದೆ.

-ಜಿ.ಎಸ್. ಗೋಪಾಲ ನಾಯ್ಕ, ಬೆಂಗಳೂರು

ಇಂಧನ ದರ ಏರಿಕೆಗೆ ಜನಸಾಮಾನ್ಯ ತತ್ತರ

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಈ ಏರಿಕೆಗೆ ನಿಯಂತ್ರಣವೇ ಇದ್ದಂತಿಲ್ಲ. ರಾಜ್ಯ ಸರ್ಕಾರ ಕೂಡ, ತನ್ನ ಪಾಲಿನ ತೆರಿಗೆ ತಗ್ಗಿಸಿ ಬೆಲೆ ನಿಯಂತ್ರಣಕ್ಕೆ ಮುಂದಾಗಿಲ್ಲ. ಮತ್ತೊಂದೆಡೆ ಕೆಎಸ್ಆರ್ಟಿಸಿ ಅಧ್ಯಕ್ಷ ಆರ್. ಶ್ರೀನಿವಾಸ, ‘ನೀರು ಹಾಕಿ ಬಸ್ ಓಡಿಸಲು ಆಗುವುದಿಲ್ಲ’ ಎಂದು ಹೇಳುವ ಮೂಲಕ ಬಸ್ ದರ ಏರಿಸುವ ಸುಳಿವು ನೀಡಿದ್ದಾರೆ. ಜನಸಾಮಾನ್ಯರ ಹಿತಾಸಕ್ತಿ ರಕ್ಷಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ.

-ಪ್ರಕಾಶ್ ಮಲ್ಕಿ ಒಡೆಯರ್, ಹೂವಿನ ಹಡಗಲಿ

ಕನ್ನಡಿಗರಿಗೆ ಟೆನಿಸ್ ಈಗ ಇನ್ನಷ್ಟು ಹತ್ತಿರ

ಫ್ರೆಂಚ್ ಟೆನಿಸ್ ಟೂರ್ನಿಯ ವೀಕ್ಷಕ ವಿವರಣೆಯನ್ನು ಮೊದಲ ಬಾರಿಗೆ ಕನ್ನಡದಲ್ಲಿ ನೀಡಲು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ಸ್ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ. ಫ್ರೆಂಚ್ ಟೆನಿಸ್ ಟೂರ್ನಿಯು ಆರು ದಶಕಗಳ ಇತಿಹಾಸ ಹೊಂದಿದೆ. ಪ್ರಸಾರ ಸಂಸ್ಥೆ ಈ ಬಾರಿ ಕನ್ನಡಕ್ಕೂ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಕನ್ನಡದಲ್ಲಿಯೇ ವೀಕ್ಷಕ ವಿವರಣೆ ದೊರೆಯುವುದರಿಂದ ಕ್ರೀಡಾಪ್ರಿಯರು ಟೆನಿಸ್ ಆಟವನ್ನು ಹೆಚ್ಚು ಆಸ್ವಾದಿಸುವುದು ಸಾಧ್ಯವಾಗಲಿದೆ; ಟೆನಿಸ್ ಅಭಿಮಾನಿಗಳಿಗೂ ಹೊಸ ಅನುಭವ.

-ನಿತ್ಯ ಆರ್., ದೊಡ್ಡಬಳ್ಳಾಪುರ

ಯುದ್ಧ: ಅವಿವೇಕದ ನಡೆ, ವಿಶ್ವಕ್ಕೆ ಹಿನ್ನಡೆ

ಕೊಲ್ಲಿ ಯುದ್ಧ ಅನಿವಾರ್ಯವಲ್ಲ; ಅದು ಅವಿವೇಕಿಗಳ ನಿರ್ಧಾರದ ಫಲಿತ. ಸ್ವಾರ್ಥ ಸಾಧನೆಗೆ ಸಣ್ಣಪುಟ್ಟ ದೇಶಗಳ ಮೇಲೆ ಹಿಡಿತ ಸಾಧಿಸಲು ಹಾಗೂ ಪ್ರತಿಷ್ಠೆಗಾಗಿ ಇದು ನಡೆಯುತ್ತಿದೆ. ಯುದ್ಧದ ಅಂತಿಮ ಪರಿಣಾಮ ಸಾವು–ನೋವು, ಆಸ್ತಿ–ಪಾಸ್ತಿ ನಷ್ಟ. ಇದನ್ನು ಅಮೆರಿಕ ಅರಿಯಬೇಕಿದೆ. ಇತಿಹಾಸದಲ್ಲಿ ನೆಪೋಲಿಯನ್ ಬೊನಾಪಾರ್ಟೆ, ಚಕ್ರವರ್ತಿ ಅಶೋಕನಂತಹ ಸಾಮ್ರಾಟರು ಯುದ್ಧ ಮಾಡಿ ಗೆದ್ದರೂ ಆತ್ಮಾವಲೋಕನ ಮಾಡಿಕೊಂಡು ಗೆದ್ದ ರಾಜ್ಯವನ್ನು ತ್ಯಜಿಸಿದ ಉದಾ ಹರಣೆ ಸಿಗುತ್ತದೆ. ಯುದ್ಧದ ಪರಿಣಾಮ ಸಣ್ಣಪುಟ್ಟ ದೇಶಗಳ ಜನಸಾಮಾನ್ಯರು ಅನುಭವಿಸುವ ಸಂಕಷ್ಟ ಹೇಳತೀರದು. ಯುದ್ಧೋನ್ಮಾದ ದೇಶಗಳು ತೈಲ ನಿಕ್ಷೇಪಕ್ಕೆ ಬೆಂಕಿ ಹಾಕುವುದರಿಂದ ಮಾನವ ಕುಲದ ಬಳಕೆಗೆ ಸಿಗಬೇಕಾದ ಇಂಧನ ವ್ಯರ್ಥ ವಾಗಿ ಸುಟ್ಟುಹೋಗುತ್ತದೆ. ಇದು ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

-ಗುರುರಾಜ ಅಂಗಡಿ, ಮುನಿರಾಬಾದ್

ಮೇಲ್ಮನೆ ಚುನಾವಣೆ: ಹೊಸಮುಖ ಬೇಕು

ಕರ್ನಾಟಕದಿಂದ ರಾಜ್ಯಸಭೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಬಿಜೆಪಿ
ಯಿಂದ ಆರಿಸಿ ಕಳುಹಿಸುವ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ರಾಜ್ಯ
ಆಳುವವರು ದೈಹಿಕವಾಗಿ ಸದೃಢರಾಗಿರಬೇಕು. ದೇವೇಗೌಡರಿಗೆ ಈಗ 94 ವರ್ಷ.
ಈ ವಯಸ್ಸಿನಲ್ಲಿ ರಾಜ್ಯಸಭೆಗೆ ಕಳುಹಿಸಿ ಹಿರಿಯರನ್ನು ಬಳಲಿಸುವುದು ಸಮಂಜಸ ವಲ್ಲ. ಸೂಕ್ತ ಅಭ್ಯರ್ಥಿಗಳು ಬಿಜೆಪಿಯಲ್ಲಿ ಇಲ್ಲವೆ? ಇಷ್ಟಕ್ಕೂ ಬಿಜೆಪಿ ಶಾಸಕರು ಬೇರೆ ಪಕ್ಷದವರಿಗೆ ಮತ ಹಾಕುವಂತಾಗುವುದು, ಆ ಶಾಸಕರನ್ನು ಆರಿಸಿ ಕಳುಹಿಸಿದ ಮತದಾರರಿಗೆ ಮಾಡುವ ಮೋಸ ಮತ್ತು ದ್ರೋಹ ಅಲ್ಲವೇ? ರಾಜಕೀಯ ಪಕ್ಷಗಳು ಪ್ರಜೆಗಳಿಗೆ ಉತ್ತರದಾಯಿ ಆಗಿರಬೇಕು.

-ಟಿ.ಆರ್. ರಘುನಾಥ್, ಬೆಂಗಳೂರು

ಕನಿಷ್ಠ ವೇತನ ಏರಿಕೆ: ಕಾರ್ಮಿಕರಿಗೆ ವರ

ಕಾರ್ಮಿಕರ ಕನಿಷ್ಠ ವೇತನವನ್ನು ಶೇ 60ರಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ. ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ಇಂತಹ ಸ್ಥಿತಿಯಲ್ಲಿ ವೇತನ ಏರಿಕೆ ಮಾಡಿರುವುದು ಅನುಕೂಲಕರವಾಗಿದೆ. ಇದರಿಂದ ರಾಜ್ಯದ ಒಂದು ಕೋಟಿ ಕಾರ್ಮಿಕರಿಗೆ ಪ್ರಯೋಜನ ವಾಗಲಿದೆ. ಇಷ್ಟು ವೇತನ ಸಿಗುವಂತೆ ಕ್ರಮವಹಿಸುವುದು ಸರ್ಕಾರದ ಹೊಣೆಯಾಗಿದೆ. ಜೊತೆಗೆ, ಕಾರ್ಮಿಕ ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೂ ಆದ್ಯತೆ ನೀಡಬೇಕಿದೆ.

-ಪವನ್ ಕುಮಾರ್ ಎಸ್., ಬಳ್ಳಾರಿ

ಬದುಕು ದುಸ್ತರ

ಡೀಸೆಲ್ ದರ ನೂರಕ್ಕೆ ಹತ್ತಿರ

ಪೆಟ್ರೋಲ್ ದರ ನೂರಕ್ಕೂ ಎತ್ತರ

ಹಾಲು, ಗ್ಯಾಸ್ ದರ ಏರಿಕೆ ನಿರಂತರ

ಜನಜೀವನ ದುಸ್ತರ!

ಅಚ್ಛೇದಿನವೆಂಬ ಭಾಷಣ ನೆನೆಸಿಕೊಂಡರೆ

ಬದುಕು ನಶ್ವರ!

-ಜೆ.ಬಿ ಮಂಜುನಾಥ, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.