ಒಬಿಸಿ ಮೀಸಲು: ಸಂಘರ್ಷ ಸೃಷ್ಟಿಗೆ ದಾರಿ

ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವುದಕ್ಕೆ ಮುನ್ನ ಸಿದ್ದರಾಮಯ್ಯನವರು ಜಾತಿ ಸಮೀಕ್ಷೆಯ ವರದಿ ಸ್ವೀಕರಿಸಿದ್ದಾರೆ. ಈ ಕ್ರಮವು ಆಡಳಿತಾತ್ಮಕ ಪ್ರಕ್ರಿಯೆ ಯಷ್ಟೇ ಅಲ್ಲದೆ, ಸ್ಪಷ್ಟ ರಾಜಕೀಯ ಹಾಗೂ ಪರಂಪರೆ ನಿರ್ಮಾಣದ ನಡೆಯಾಗಿದೆ. ಕಾಂಗ್ರೆಸ್ನೊಳಗಿನ ವಿರೋಧದ ನಡುವೆಯೂ ಅವರು, ‘ಅಹಿಂದ’ ರಾಜಕೀಯದ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಮತ್ತೊಂದೆಡೆ ಸರ್ಕಾರವನ್ನು ಸಂಕೀರ್ಣ ರಾಜಕೀಯ ಕೂಪಕ್ಕೂ ತಳ್ಳಿದಂತಾಗಿದೆ. ಒಬಿಸಿ ಮೀಸಲಾತಿಯನ್ನು ಶೇ 42ಕ್ಕೇರಿಸುವ ಪ್ರಸ್ತಾವವು ಗಂಭೀರ ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕಲಿದೆ. ಪ್ರಮಾಣಿತ ದತ್ತಾಂಶವಿಲ್ಲದೆ ಮೀಸಲಾತಿಯು ಶೇ 50ರಷ್ಟು ಮೀರಬಾರದೆಂದು ಸುಪ್ರೀಂಕೋರ್ಟ್ ಹೇಳಿದೆ. ಜನಸಂಖ್ಯೆ ಪ್ರಮಾಣವೇ ಮೀಸಲಾತಿ ನಿಗದಿಗೆ ಮಾನದಂಡ ಆಗುವುದಿಲ್ಲ. ನಿರಂತರ ಜಾತಿ ವರ್ಗೀಕರಣ, ಉಪವರ್ಗೀಕರಣವು ಜಾತಿ ಚೇತನವನ್ನು ಮತ್ತಷ್ಟು ಗಾಢಗೊಳಿಸಿ, ಆಡಳಿತವನ್ನು ‘ಕೋಟಾ ರಾಜಕೀಯ’ಕ್ಕೆ ಸೀಮಿತ ಗೊಳಿಸಲಿದೆ; ನ್ಯಾಯಾಂಗ, ರಾಜಕೀಯ ಸಂಘರ್ಷಗಳಿಗೂ ನಾಂದಿ ಹಾಡಲಿದೆ.

-ಕೆ.ವಿ. ಚಂದ್ರಮೌಳಿ, ಮೈಸೂರು

ಸಿದ್ದರಾಮಯ್ಯ ನಡೆ, ರಾಜಕೀಯ ಪಾಠ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ನಿರೀಕ್ಷಿತ ರಾಜೀನಾಮೆಯೂ ಹೌದು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಯಾರು ಮುಖ್ಯಮಂತ್ರಿಯಾಗಬೇಕೆಂಬ ಪ್ರಶ್ನೆ ಉದ್ಭವಿಸಿತ್ತು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ತಲಾ ಎರಡೂವರೆ ವರ್ಷ ಅಧಿಕಾರ ವಹಿಸಿಕೊಳ್ಳಲಿ ಎಂಬ ಸೂತ್ರವನ್ನು ಹೈಕಮಾಂಡ್ ಮಟ್ಟದಲ್ಲಿ ಹೆಣೆಯಲಾಗಿತ್ತು. ಆ ಕಾಲ ಸನ್ನಿಹಿತ ವಾಗಿ ಹೈಕಮಾಂಡ್ ಹೇಳಿದ ತಕ್ಷಣವೇ ಅವರು ರಾಜೀನಾಮೆ ನೀಡಿದ್ದಾರೆ. ಪ್ರಸಕ್ತ ರಾಜಕಾರಣದಲ್ಲಿ ಮಾತಿಗೆ ಬದ್ಧತೆ ತೋರುವ ರಾಜಕಾರಣಿಗಳು ಅತಿವಿರಳ. ಇಂತಹ ಸನ್ನಿವೇಶಗಳು ಯುವಜನರ ಪಾಲಿಗೂ ಬಹುದೊಡ್ಡ ರಾಜಕೀಯ ಪಾಠ.

-ಅಶ್ವಿನಿ ಪಾಟೀಲ, ಬಾಗಲಕೋಟೆ

ಡಿಸಿಎಂ ಹುದ್ದೆಗಳ ಸೃಷ್ಟಿ ಬೊಕ್ಕಸಕ್ಕೆ ಹೊರೆ

ಉಪಮುಖ್ಯಮಂತ್ರಿ, ಉಪಪ್ರಧಾನಿ ಹುದ್ದೆಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಆದರೂ, ಹಲವು ರಾಜ್ಯಗಳಲ್ಲಿ ಸಂಪುಟ ರಚನೆ ಸಂದರ್ಭದಲ್ಲಿ ಜಾತಿಕೋಪ ತಣಿಸಲು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗುತ್ತಿದೆ. ಮುಖ್ಯಮಂತ್ರಿಗೆ ಸಿಗುವ ಸವಲತ್ತಿನ ಶೇ 75ರಷ್ಟು ಸವಲತ್ತುಗಳನ್ನು ಉಪಮುಖ್ಯಮಂತ್ರಿಗೂ ನೀಡಲೇಬೇಕು. ಹಾಗಾಗಿ, ಇದು ಬೊಕ್ಕಸಕ್ಕೆ ಹೊರೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಈಗ ಸಿದ್ದರಾಮಯ್ಯನವರ ನಿರೀಕ್ಷಿತ ಉತ್ತರಾಧಿಕಾರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ‘ಮುಖ್ಯಮಂತ್ರಿ’ಯಾಗಲು ವಿಫಲರಾದವರ ಓಲೈಕೆಗಾಗಿ ‘ಉಪಮುಖ್ಯಮಂತ್ರಿ’ ಹುದ್ದೆ ಸೃಷ್ಟಿಗೆ ಹೈಕಮಾಂಡ್ ಅವಕಾಶ ನೀಡಬಾರದು. ನೂತನ ಸರ್ಕಾರವು ‘ತೀರ್ಥದಂತೆ’ ಬಳಸಬೇಕಾದ ತೆರಿಗೆದಾರನ ಹಣವನ್ನು ‘ನೀರಿನಂತೆ’ ಬಳಸುವ ಧಾಷ್ಟ್ಯ ನಡೆ ಅನುಸರಿಸದಿರಲಿ.

-ಸಿದ್ಧಲಿಂಗಸ್ವಾಮಿ ಹಿರೇಮಠ, ತುಮಕೂರು

ಮತ್ತಷ್ಟು ಹಿಗ್ಗಿದ ಪ್ರಾದೇಶಿಕ ಅಸಮಾನತೆ

ಬಿಡದಿ ಟೌನ್ಶಿಪ್ ಯೋಜನೆಯು ₹18,133 ಕೋಟಿ ವೆಚ್ಚದ ಬೃಹತ್ ‘ಎಐ ಚಾಲಿತ ನಗರ’ದ ಆಶಯ ಹೊಂದಿದೆ. ಇದು ರಾಜಕೀಯ ವಿವಾದ ಮತ್ತು ರೈತರ ಪ್ರತಿಭಟನೆಗೆ ಕಾರಣವಾಗಿದೆ. ಯೋಜನೆಗಾಗಿ 7,481 ಎಕರೆ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವುದು ಕೃಷಿ ವಲಯದ ನಾಶ ಮತ್ತು ರಿಯಲ್ ಎಸ್ಟೇಟ್ ದಂಧೆಗೆ ದಾರಿ ಮಾಡಿಕೊಡಲಿದೆ. ಮತ್ತೊಂದೆಡೆ, ಬೃಹತ್ ಹೂಡಿಕೆ ಯೋಜನೆಗಳು ಬೆಂಗಳೂರಿನ ಸುತ್ತಮುತ್ತ ಕೇಂದ್ರೀಕೃತವಾಗುತ್ತಿರುವುದು ಸರ್ಕಾರದ ಪ್ರಾದೇಶಿಕ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತದೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರಗಿಯು ಕೈಗಾರಿಕೆಗಳಿಂದ ವಂಚಿತವಾಗುತ್ತಿವೆ. ಸರ್ಕಾರ ಪ್ರಾದೇಶಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸದಿರಲಿ.

-ಇಟ್ಟಿಗೆ ಅಜಯಕುಮಾರ್, ಹೂವಿನ ಹಡಗಲಿ

ನಾಯಿಗಳಿಗೆ ರಸ್ತೆಗಳು ಶೌಚಾಲಯಗಳೆ?

ನಾಯಿಗಳನ್ನು ಬೀದಿಯಲ್ಲೇ ಬಿಡಬೇಕೆಂದು ಪ್ರಾಣಿದಯಾ ಸಂಘಟನೆಗಳು ಒತ್ತಾಯಿಸುತ್ತಿವೆ. ಶ್ವಾನಪ್ರಿಯರು ಬೀದಿನಾಯಿಗಳನ್ನು ದತ್ತು ಪಡೆದು ತಮ್ಮ ಮನೆ ಯಲ್ಲೇ ಸಾಕಿಕೊಳ್ಳಬಹುದು. ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳನ್ನು ಅಲೆದಾಡಲು ಬಿಡುವುದು ಅಪಾಯಕಾರಿ. ಬಹುತೇಕರು ನಾಯಿಗಳನ್ನು ವಾಕಿಂಗ್ಗೆ ಕರೆತಂದು ಬೇರೆಯವರ ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಿಸುತ್ತಾರೆ. ನಾಯಿಗಳನ್ನು ಮಕ್ಕಳಂತೆ ಪ್ರೀತಿಸುವ ಅವರು, ತಮ್ಮ ಮಕ್ಕಳಿಗೂ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ವರ್ತಿಸಲು ಬಿಡುತ್ತಾರೆಯೆ? ಸಾರ್ವ ಜನಿಕ ಸ್ಥಳಗಳನ್ನು ಶ್ವಾನ ಶೌಚಾಲಯಗಳಂತೆ ಬಳಸುವುದು ನಾಗರಿಕ ಪ್ರಜ್ಞೆಯಲ್ಲ.

-ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು

ಸರ್ಕಾರಿ ಬೆಕ್ಕಿಗೆ ಗಂಟೆ ಕಟ್ಟುವವರಾರು?

‘ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಒತ್ತಾಯ ಮಾಡುವುದಕ್ಕೆ ಆಗುವುದಿಲ್ಲ’ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಈಗಾಗಲೇ, ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿಯಿಲ್ಲದೆ ಸೊರಗುತ್ತಿವೆ. ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳು ಮುಚ್ಚುವ ಹಂತಕ್ಕೆ ತಲಪಿವೆ. ಸರ್ಕಾರಿ ಉದ್ಯೋಗ ಪಡೆದು ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ನೌಕರರು ಸರ್ಕಾರದ ಮಾತುಗಳನ್ನು ಧಿಕ್ಕರಿಸುವುದು ಅಕ್ಷಮ್ಯ. ಮತ್ತೊಂದೆಡೆ ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಎನ್ನುವುದು ಸರ್ಕಾರವು ಆಡಳಿತಾತ್ಮಕವಾಗಿ ಸೋಲನ್ನು ಒಪ್ಪಿಕೊಂಡಂತಾಗು ತ್ತದೆ. ಈ ವಿಷಯದಲ್ಲಿ ಸರ್ಕಾರವೇ ಸೋತರೆ ಖಾಸಗಿ ಸಂಸ್ಥೆಗಳ ಉಪಟಳಕ್ಕೆ ತಡೆ ಇರುವುದಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಸ್ಪಷ್ಟ ನಿಯಮ ರೂಪಿಸಬೇಕಿದೆ.

-ದಿವಾಕರ್ ಡಿ., ಮದ್ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.