ಭಾನುವಾರ, ಜುಲೈ 25, 2021
21 °C

ಪೂರ್ವಗ್ರಹಪೀಡಿತ ಹೇಳಿಕೆ ನಿಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಊಹಾಪೋಹದ ವರದಿಗಳಿಗೆ ಸಂಬಂಧಪಟ್ಟಂತೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅಂಬರೀಷ್ ಅವರ ವಿರುದ್ಧ ಬಳಸಿರುವ ಭಾಷೆ ಅತ್ಯಂತ ಕೀಳು ಮಟ್ಟದ್ದು ಎಂದು ವಿಷಾದಪೂರ್ವಕವಾಗಿ ಹೇಳಬೇಕಾಗಿದೆ.

ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ವ್ಯಕ್ತಿ ಇಂತಹ ಹೇಳಿಕೆ ನೀಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂಬರ್ಥದ ಸುಮಾಲತಾ ಅವರ ಹೇಳಿಕೆಗೆ ಉತ್ತರ ನೀಡುವ ಭರದಲ್ಲಿ ‘ಕೆಆರ್‌ಎಸ್‌ನಲ್ಲಿ ಲೀಕೇಜ್ ಆಗುತ್ತಿದ್ದರೆ, ಅದನ್ನು ತಡೆಯಲು ಸುಮಲತಾ ಅವರನ್ನೇ ಅಡ್ಡಲಾಗಿ ಮಲಗಿಸಿ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಒಬ್ಬ ಲೋಕಸಭಾ ಸದಸ್ಯೆಯ ಬಗ್ಗೆ ಹೀಗೆ ಅಗೌರವಯುತ ವಾದ ಹೇಳಿಕೆ ನೀಡುವುದು ತೀವ್ರ ಖಂಡನಾರ್ಹ.

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾ ಅವರ ವಿರುದ್ಧ ತಮ್ಮ ಮಗ ನಿಖಿಲ್ ಅನುಭವಿಸಿದ ಸೋಲಿನಿಂದ ಹತಾಶರಾಗಿರುವ ಕುಮಾರಸ್ವಾಮಿ, ಸುಮಲತಾ ವಿರುದ್ಧ ನಿರಂತರವಾಗಿ ಪೂರ್ವಗ್ರಹಪೀಡಿತ ಹೇಳಿಕೆಗಳನ್ನು ನೀಡುತ್ತಿರುವುದನ್ನು ಜನಸಾಮಾನ್ಯರು, ವಿಶೇಷವಾಗಿ ಮಂಡ್ಯದ ಜನ ಗಮನಿಸುತ್ತಾ ಬಂದಿದ್ದಾರೆ. ಇನ್ನು ಮುಂದಾದರೂ ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ.

–ಕೆ.ವಿ.ವಾಸು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು