ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಆಭಾಸವಾಗದಂತೆ ಪದ ಉಚ್ಚಾರಣೆ ಇರಲಿ

Last Updated 26 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

‘ಕನ್ನಡದ ಕೆಲವು ಪದರೂಪಗಳು ಬರವಣಿಗೆಯಲ್ಲಿ ತಪ್ಪಾಗುತ್ತವೆಯೇ ವಿನಾ ಮಾತುಕತೆಯಲ್ಲಿ ಅವು ಉಚ್ಚಾರಣೆ ಗೊಳ್ಳುವುದರಿಂದ ಅರ್ಥದಲ್ಲಿ ಯಾವುದೇ ಗೊಂದಲ ಉಂಟಾಗದು’ ಎಂಬ ಸಿ.ಪಿ.ನಾಗರಾಜ ಅವರ ಹೇಳಿಕೆ (ವಾ.ವಾ., ಡಿ. 25) ಅಸಮಂಜಸ. ಕನ್ನಡದ ಒಂದೊಂದು ಪದಕ್ಕೂ ಅದರದೇ ಆದ ಧ್ವನಿ, ಉಚ್ಚಾರ, ಅರ್ಥ ಇದೆ. ಅವನ್ನು ಹಾಗೇ ಉಚ್ಚರಿಸಿದರೇನೆ ಅದಕ್ಕೊಂದು ಅರ್ಥ. ಅದನ್ನುಬಿಟ್ಟು ಹೀಗೂ ಅಂದರೆ ತಪ್ಪಿಲ್ಲ ಎನ್ನುವುದಾದರೆ ಅದು ಮಕ್ಕಳ ‘ತೊದಲ್ನುಡಿ’ಗೆ ಸಮವಾಗುತ್ತದೆ.

ಉದಾಹರಣೆಗೆ, ‘ಅಣ್ಣ’ ಪದವನ್ನು ‘ಅನ್ನ’, ಆದರ– ಹಾದರ, ಕಳ್ಳು– ಕಲ್ಲು, ಬೆಣ್ಣೆ– ಬೆನ್ನೆ, ಮಣೆ– ಮನೆ, ಅಟ್ಟು– ಹಟ್ಟು, ಹಕ್ಕಿ– ಅಕ್ಕಿ ಎಂದು ಕರೆಯುವುದರಲ್ಲಿ ತಪ್ಪಿಲ್ಲವೇ? ಈ ಎಲ್ಲ ಪದಗಳಿಗೂ ಇರುವ ಅರ್ಥಗಳೂ ಬೇರೆ ಬೇರೆಯಾಗಿವೆ. ಇವನ್ನು ಬಳಸಿದಾಗ ಆಭಾಸ, ಅಪಾರ್ಥವುಂಟಾಗದೇ ಇರದು. ಪ್ರಾಂತ್ಯಭೇದದಿಂದಾಗಿ ಇಂಥ ವ್ಯತ್ಯಾಸಗಳು ಸಹಜವಾಗಿರುತ್ತವೆ. ಆದರೆ, ಅರ್ಥಕ್ಕೆ ಧಕ್ಕೆಯಾಗದಂತೆ, ಆಭಾಸವಾಗದಂತೆ ಪದವನ್ನು ಸರಿಯಾಗಿ ಉಚ್ಚರಿಸುವ ರೂಢಿ ಮಾಡಿಕೊಂಡರೆ ಕನ್ನಡದ ಗರಿಮೆಯೂ ಹೆಚ್ಚುತ್ತದೆ.

ಡಾ. ರಾಜಶೇಖರ ಸಿ.ಡಿ.,ಈಚಲಯಲ್ಲಾಪುರ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT