ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕಾಶ್ಮೀರದಲ್ಲಿ ಪಂಡಿತರ ಜೀವಕ್ಕೆ ರಕ್ಷಣೆ ನೀಡಿ

Last Updated 17 ಆಗಸ್ಟ್ 2022, 20:42 IST
ಅಕ್ಷರ ಗಾತ್ರ

ಜಮ್ಮು– ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಯಿಂದ ಕಾಶ್ಮೀರಿ ಪಂಡಿತರೊಬ್ಬರು ಸಾವಿಗೀಡಾಗಿರುವುದು ಕಳವಳಕಾರಿ.

ಈಚೆಗಷ್ಟೇ ಲಾಹೋರ್‌ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿದೇಶಾಂಗ ನೀತಿಯನ್ನು ಕೊಂಡಾಡುವುದರೊಂದಿಗೆ, ‘ಭಾರತ ಸರ್ಕಾರವು ವಿದೇಶಿ ಒತ್ತಡಗಳಿಗೆ ಬಗ್ಗದೆ ತನ್ನ ಜನರ ಅಗತ್ಯಕ್ಕೆ ತಕ್ಕಂತೆ ಒಂದಿಷ್ಟು ಸದೃಢ ವಿದೇಶಾಂಗ ನೀತಿಯನ್ನು ರೂಪಿಸಿಕೊಂಡಿದೆ.

ಭಾರತಕ್ಕೆ ಇದು ಸಾಧ್ಯವಾಗುವುದಾದರೆ ಪಾಕಿಸ್ತಾನಕ್ಕೆ ಏಕೆ ಸಾಧ್ಯವಿಲ್ಲ?’ ಎಂದಿರುವುದು ಗಮನಾರ್ಹವಾಗಿದೆ. ಪಾಕಿಸ್ತಾನಕ್ಕೂ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ತನ್ನ ಪಾಪದ ಕೂಸಾಗಿ ಬೆಳೆಸಿದ ಭಯೋತ್ಪಾದಕತೆ ಎನ್ನುವ ಭಸ್ಮಾಸುರನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಹಂತಕ್ಕೆ ಬಂದು ನಿಂತಿದೆ. ಪಾಕ್‌ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಇನ್ನಷ್ಟು ಗಟ್ಟಿಯಾಗಿ ಸೆಟೆದು ನಿಲ್ಲುವಂತೆ ಭಾರತ ನೋಡಿಕೊಳ್ಳಬೇಕು.
ಎಚ್.ಎನ್.ಕಿರಣ್ ಕುಮಾರ್,ಹಳೇಹಳ್ಳಿ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT