ಭಾನುವಾರ, ಆಗಸ್ಟ್ 1, 2021
26 °C

ಪಬ್ಲಿಕ್‌ ಶಾಲೆ: ಬೇಕಾಗಿದೆ ಮಾರ್ಗದರ್ಶಿ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಆದರೆ ಇಲ್ಲಿಗೆ ಬೇಕಾದ ಮೂಲ ಸೌಲಭ್ಯಗಳು ಹಲವು ಕಡೆ ಇನ್ನೂ ದೊರೆತಿಲ್ಲ. ಈ ಶಾಲೆಗಳ ಆಡಳಿತಾತ್ಮಕ ಸಮಸ್ಯೆಗಳು, ಬೋಧನಾ ಸಮಸ್ಯೆ, ಶಾಲಾಭಿವೃದ್ಧಿ ಸಮಿತಿಯ ರಚನೆ, ಹಣಕಾಸು ವ್ಯವಹಾರ ಸೇರಿದಂತೆ ಹತ್ತು ಹಲವು ಶೈಕ್ಷಣಿಕ ಮತ್ತು ಬೋಧನಾ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗದರ್ಶಿ ಸೂತ್ರಗಳು ಸಿದ್ಧವಾಗದಿರುವುದು ಪಬ್ಲಿಕ್ ಶಾಲೆಯ ಸದುದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ. ಯಾವುದೇ ಹೊಸ ಯೋಜನೆ ಜಾರಿ ಮಾಡುವ ಮುನ್ನ ಆ ಯೋಜನೆಯ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಏರ್ಪಾಟು ಮಾಡಬೇಕು. ಆದರೆ ಇಲ್ಲಿ ಶಾಲೆಗಳು ಆರಂಭವಾಗಿ ವರ್ಷಗಳೇ ಉರುಳಿದರೂ ನ್ಯೂನತೆ ನಿವಾರಣೆಗೆ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರ.

ತಾವುಗಳೇ ಪಬ್ಲಿಕ್ ಶಾಲೆಯ ಮುಖ್ಯಸ್ಥರು ಎಂದು ಹೇಳಿದ್ದರೂ ಯಾವೊಂದು ಅಧಿಕಾರವೂ ನಿಗದಿಯಾಗ ದಿರುವುದರಿಂದ ಕೆಲಸ ಮಾಡಲು- ಮಾಡಿಸಲು ಕಷ್ಟವಾಗಿದೆ ಎನ್ನುತ್ತಾರೆ ಪ್ರಾಂಶುಪಾಲರು. ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭವಾದರಷ್ಟೇ ಸಾಲದು. ಅಧಿಕಾರ ಹಂಚಿಕೆ, ಆಡಳಿತ ವಿಧಾನಗಳ ಬಗ್ಗೆ ಮಾರ್ಗದರ್ಶಿ ಸೂತ್ರಗಳು ರೂಪುಗೊಳ್ಳಬೇಕು. ಇಲ್ಲದಿದ್ದರೆ ಈ ಯೋಜನೆಯು ಹಳೆಯ ಶಾಲೆಯ ಹೆಸರಿಗೆ ಹೊಸ ಹೆಸರಿನ ಲೇಬಲ್ ಅಂಟಿ ಸಿದಂತಾಗುತ್ತದೆ ಅಷ್ಟೆ.

- ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್‌.ಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.