ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಜನ ಪ್ರದೇಶದಲ್ಲಿ ಕ್ವಾರಂಟೈನ್‌ ಮಾಡಿ

ಅಕ್ಷರ ಗಾತ್ರ

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ತಮಗೆ ಚಿಕನ್, ಮೀನು ಕೊಟ್ಟಿಲ್ಲ ಎಂಬ ಕಾರಣಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದನ್ನು ಓದಿ (ಪ್ರ.ವಾ., ಮೇ 24) ಬಹಳ ದುಃಖವಾಯಿತು. ಮಾನವೀಯತೆಗೆ ಬೆಲೆಯೇ ಇಲ್ಲವೇ? ತಮ್ಮ ಸುಖವನ್ನು ಬದಿಗೊತ್ತಿ, ತಮ್ಮ ಮಕ್ಕಳ ಕಷ್ಟ ಸುಖವನ್ನೂ ನೋಡದೆ ಕೊರೊನಾ ಸಂತ್ರಸ್ತರಿಗಾಗಿ ದುಡಿಯುತ್ತಿರುವ ಕಾರ್ಯಕರ್ತೆಗೆ ಇಂತಹ ಕಷ್ಟಗಳೂ ಎದುರಾಗಬಹುದು ಎಂದು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅದೇ ಸ್ಥಳದಲ್ಲಿ ತಮ್ಮ ಬಂಧುಬಾಂಧವರು ಇದ್ದಿದ್ದರೆ ಹೀಗೆಯೇ ತೊಂದರೆ ಕೊಡುತ್ತಿದ್ದರೇ? ಮೃಗತ್ವ ತುಂಬಿಕೊಂಡಿರುವ ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂತಹವರನ್ನು ಸಾಧ್ಯವಾದಷ್ಟೂ ಊರಿನಿಂದ ಹೊರಗೆ, ಯಾರ ಬಂದವೂ ಇಲ್ಲದ ಸ್ಥಳದಲ್ಲಿ ಕ್ವಾರಂಟೈನ್ ಮಾಡಿದರೆ ಬುದ್ಧಿ ಬರಬಹುದೇನೊ?

ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT