ಬುಧವಾರ, ನವೆಂಬರ್ 13, 2019
24 °C

ಹೊರ ರಾಜ್ಯದಲ್ಲಿ ವಿಚಾರಣೆಯಾಗಬೇಕಿದೆ

Published:
Updated:

ರಾಘವೇಶ್ವರ ಶ್ರೀಗಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 10ನೇ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿದಿರುವುದು ಸೋಜಿಗದ ಸಂಗತಿ.

ವಿಚಾರಣಾಧೀನ ವ್ಯಕ್ತಿಯು ನ್ಯಾಯಾಧೀಶರಿಗೆ ಸಂಬಂಧಿಕನೋ, ಸ್ನೇಹಿತನೋ ಅಥವಾ ವ್ಯವಹಾರದಲ್ಲಿ ಪಾಲುದಾರನೋ ಆಗಿದ್ದ ಸಂದರ್ಭದಲ್ಲಿ ಹಿಂದೆ ಸರಿದು, ನಿಷ್ಪಕ್ಷಪಾತ ವಿಚಾರಣೆಗೆ ಅನುವು ಮಾಡಿಕೊಟ್ಟರೆ ಅದನ್ನು ನೈತಿಕ ಕಾರಣವೆಂದು ಒಪ್ಪಿಕೊಳ್ಳಬಹುದು.

ಆದರೆ ರಾಘವೇಶ್ವರ ಶ್ರೀಗಳ ವಿಚಾರದಲ್ಲಿ ನುಣುಚಿಕೊಳ್ಳುತ್ತಿರುವ ಪ್ರವೃತ್ತಿ ಪದೇ ಪದೇ ಕಂಡುಬರುತ್ತಿದೆ. ಆದಕಾರಣ ಜನರಲ್ಲಿ ಈ ಬಗ್ಗೆ ಸಹಜವಾಗಿಯೇ ಶಂಕೆ ಉಂಟಾಗಿದೆ. ಶ್ರೀಗಳಿಗೆ ಸಂಬಂಧಿಸಿದ ಈ ಪ್ರಕರಣವನ್ನು ಹೊರರಾಜ್ಯದ ನ್ಯಾಯಾಲಯಕ್ಕೆ ವರ್ಗಾಯಿಸುವುದು ಉಚಿತ ಅನ್ನಿಸುತ್ತದೆ. ಸಾಮಾನ್ಯ ಜನರ ಇಂದಿನ ಏಕೈಕ ಆಶಾಕಿರಣವಾಗಿರುವ ನ್ಯಾಯಾಲಯಗಳು ಜನರ ವಿಶ್ವಾಸ ಉಳಿಸಿ
ಕೊಳ್ಳುವುದು ಅಗತ್ಯ.

ಸಿದ್ಧಾರ್ಥ ಎಸ್., ಬೆಂಗಳೂರು

ಪ್ರತಿಕ್ರಿಯಿಸಿ (+)