ಮಂಗಳವಾರ, ಸೆಪ್ಟೆಂಬರ್ 28, 2021
21 °C

ಅದೆಷ್ಟು ‘ಬಾಂಬ್’ಗಳು ಇವೆಯೋ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಘಸ್ಫೋಟವು ನಿಸರ್ಗದ ಜಲಬಾಂಬ್ ಆಗಿರುವ ಕುರಿತು ಟಿ.ಆರ್.ಅನಂತರಾಮು ಅವರ ಲೇಖನ
(ಪ್ರ.ವಾ., ಆ. 3) ಪ್ರಕೃತಿಯ ಉಡಿಯಲ್ಲಿ ಇಂತಹ ಇನ್ನೂ ಅದೆಷ್ಟು ‘ಬಾಂಬ್’ಗಳು ಇವೆಯೋ ಗೊತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಭೂಮಿ ತನ್ನ ಸಮತೋಲನ ಕಾಪಾಡಿಕೊಳ್ಳಲು ಏನೆಲ್ಲ ಮಾಡುವುದೋ ಈ ಹುಲು ಮಾನವನಿಗೆ ಅದೆಲ್ಲಿ ಅರ್ಥವಾಗಬೇಕು? ಸಾಮಾನ್ಯರಾದ ನಾವು ಗುಡುಗು, ಸಿಡಿಲಿಗೇ ನಡುಗಿ ಹೋಗುತ್ತೇವೆ ಇಲ್ಲ ತತ್ತರಿಸುತ್ತೇವೆ. ಜ್ವಾಲಾಮುಖಿ, ಭೂಕಂಪನ, ಸುನಾಮಿ, ಜಲಪ್ರಳಯ, ಚಂಡಮಾರುತದಂತಹವು ಎಷ್ಟು ಜೀವಿಗಳನ್ನು ನುಂಗಿವೆಯೊ? ಅದೆಷ್ಟು ಮನುಷ್ಯನಿರ್ಮಿತಿಗಳ ಸರ್ವನಾಶ ಮಾಡಿವೆಯೊ?

ಈ ಭೂಮಿಯ ವಿಕಾಸವನ್ನು ಅವಲೋಕಿಸಿದಾಗ, ಒಂದು ಹಂತದಲ್ಲಿದ್ದ ಜೀವವೈವಿಧ್ಯ ಮತ್ತೊಂದು ಹಂತದಲ್ಲಿ ಇಲ್ಲದಿರುವುದು ತಿಳಿಯುತ್ತದೆ. ದೈತ್ಯ ಡೈನೊಸಾರ್‌ಗಳು ಇಲ್ಲವಾದವು. ಇದು ಸಹಜ ಇರಬಹುದು. ಆದರೆ ಇಂತಹ ಅವಘಡವು ಜೀವಿಗಳ- ಮಾನವನ ಅಳಿವಿನ ಮುನ್ಸೂಚನೆಯೇ? ಭವಿಷ್ಯ ಹೇಗಿದೆಯೋ, ಏನಿದೆಯೋ ಗೊತ್ತಿಲ್ಲ. ಆದರೂ ಪ್ರಕೃತಿಯೊಂದಿಗೆ ಮಾನವನು ಪರಿಸರ ಸಂರಕ್ಷಣೆಯ ಮೂಲಕ ಸಮರಸದಿಂದ ಬಾಳಬೇಕಾದ ಜರೂರು ಇದೆ.  

-ಬಿ.ಆರ್.ಅಣ್ಣಾಸಾಗರ, ಸೇಡಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.