ಭಾನುವಾರ, ಡಿಸೆಂಬರ್ 15, 2019
20 °C

ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ: ಮೋದಿ ಮಾತೂ ಇಲ್ಲ; ಟ್ವೀಟೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ರಾಜ್ಯಕ್ಕೆ 13 ಸಲ ಬಂದು ಪ್ರಚಾರ ಮಾಡಿದರು. ನೆರೆರಾಜ್ಯ ಮಹಾರಾಷ್ಟ್ರ ವಿಧಾನಸಭೆಗೆ ಇನ್ನೇನು ಚುನಾವಣೆ ಘೋಷಣೆಯಾಗಲಿದೆ. ಅಲ್ಲಿಗೂ ಕನಿಷ್ಠ ಹತ್ತು ಸಲ ಬಂದು ಭಾಷಣ ಮಾಡಬಹುದು. ಪ್ರವಾಹದಿಂದ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬದುಕು ನಲುಗಿದೆ. ಚುನಾವಣೆ ಸಂದರ್ಭದಲ್ಲಿ ಬಂದು ಹೋಗಲು ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಾದರೆ ಇಂತಹ ಕಷ್ಟದ ಸಂದರ್ಭದಲ್ಲೂ ಬಂದು ನೋಡಲು ಸಮಯ ಹೊಂದಿಸಿಕೊಳ್ಳಬಹುದಲ್ಲವೇ? ಅಧಿಕಾರಸ್ಥರಿಗೆ ಚುನಾವಣೆ ಮಾತ್ರ ಮುಖ್ಯ ಎಂಬುದು ಇದರಿಂದ ಗೊತ್ತಾಗುತ್ತದೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ. ಪ್ರವಾಹ ಇಳಿದಿದೆ. ಆದರೆ, ಸಾವಿರಾರು ಕುಟುಂಬಗಳಿಗೆ ಈಗಲೂ ನೆಲೆ ಇಲ್ಲವಾಗಿದೆ. ಇದರ ಬಗ್ಗೆ ಮಾತೂ ಇಲ್ಲ. ಟ್ವೀಟೂ ಇಲ್ಲ. ಮಾತು ಸೋತ ಭಾರತ!

–ಮುರಳಿ, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು