‘ರಾಮನಿಗೂ ಸೀತೆಗೂ...’

7

‘ರಾಮನಿಗೂ ಸೀತೆಗೂ...’

Published:
Updated:

‘ಸೀತೆಯನ್ನು ಅಪಹರಿಸಿದ್ದು ರಾಮ! (ಪ್ರ.ವಾ., ಜೂನ್‌ 2). ಗುಜರಾತಿನ ಪಠ್ಯಪುಸ್ತಕವೊಂದರಲ್ಲಿ ಹೀಗಿದೆಯಂತೆ! (ಧನ್ಯೆ ಸೀತೆ).

ಅದು ನಿಸ್ಸಂದೇಹವಾಗಿ ‘ತಪ್ಪು’ ಎನ್ನುವಂತಿಲ್ಲ; ರಾಮಾಯಣ ವೈಚಿತ್ರ್ಯಗಳು ಒಂದಲ್ಲ, ಎರಡಲ್ಲ; ಮತ್ತೆ, ರಾಮಾಯಣವೂ ಒಂದಲ್ಲ, ‘ಶತಕೋಟಿ ಪ್ರವಿಸ್ತರಂ!’

ರಾಮಾಯಣದ ಬೌದ್ಧ, ಜೈನ ಪರಂಪರೆಗಳೂ ಉಂಟು. ಬೌದ್ಧ ಪರಂಪರೆಯಲ್ಲಿ ರಾಮ, ಲಕ್ಷ್ಮಣ,
ಸೀತೆಯರು ಅಣ್ಣ ತಂಗಿಯರು! (ಅಣ್ಣ– ತಂಗಿಯರ ಮದುವೆ ಹಿಂದೆ ನಿಷಿದ್ಧವಾಗಿರಲಿಕ್ಕಿಲ್ಲ). ಜೈನ ಪರಂಪರೆಯ ಒಂದು ಶಾಖೆಯಲ್ಲಿ ಸೀತೆ ಮಂಡೋದರಿಯ ಮಗಳು! ಹೀಗೆಲ್ಲ ಇರುವಾಗ, ಯಾವುದೋ ರಾಮಾಯಣದಲ್ಲಿ ರಾಮನಿಂದ ಸೀತಾಪಹರಣವಾಗಿರಬಾರದೇಕೆ ಎಂದು ‘ಬೃಹಸ್ಪತಿ’ಯೊಬ್ಬ ಊಹಿಸಿ ಹಾಗೆಂದು ಪಠ್ಯದಲ್ಲಿ ನಿರೂಪಿಸಿರಬಹುದಲ್ಲವೆ? (ಹಳೆಯ ‘ಪುರಾಣ’ ಬೇಡ, ಈ ಕಾಲಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಇರಲಿ ಎಂಬ ಇರಾದೆಯೂ ಇದ್ದೀತು!)

ಇದನ್ನೆಲ್ಲ ಗಮನಿಸಿದಾಗ, ‘ಬೆಳಗಾನ ರಾಮಾಯಣ ಕೇಳಿ, ರಾಮನಿಗೂ ಸೀತೆಗೂ ಏನಾಗಬೇಕು?’ ಎಂದು ಕೇಳಿದರೆ, ಪ್ರಶ್ನೆ
ಅಪ್ರಸ್ತುತವೆನಿಸದು!

–ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !