ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯ: ಬಡ್ಡಿ ದರ ಹೆಚ್ಚಿಸಿ

Last Updated 1 ಜುಲೈ 2022, 20:15 IST
ಅಕ್ಷರ ಗಾತ್ರ

ಹಿಂದಿನ ಹತ್ತು ತ್ರೈಮಾಸಿಕಗಳಿಂದ ಪಿಪಿಎಫ್, ಎನ್‌ಎಸ್‌ಸಿ ಮುಂತಾದ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಪರಿಷ್ಕರಣೆ ಆಗಿಲ್ಲ. ಈಗ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲೂ ಬಡ್ಡಿ ಹೆಚ್ಚಳ ಮಾಡದೆ ಕೇಂದ್ರ ಸರ್ಕಾರ ಮೌನವಾಗಿದೆ. ಒಂದೆಡೆ ಹೆಚ್ಚುತ್ತಿರುವ ಹಣದುಬ್ಬರ, ಇನ್ನೊಂದೆಡೆ ಸಾಲದ ಬಡ್ಡಿ ದರ ಹೆಚ್ಚಳದಿಂದ ಜೇಬಿಗೆ ಕತ್ತರಿ ಹಾಕುತ್ತಿರುವ ಮಾಸಿಕ ಕಂತುಗಳು. ಆರ್‌ಬಿಐ ರೆಪೊ ದರದಲ್ಲಿ ಶೇಕಡ 0.90ರಷ್ಟು ಏರಿಕೆಯಾಗಿದೆ. ಹೀಗಿದ್ದರೂ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳದ ಬಗ್ಗೆ ಸರ್ಕಾರ ನಿರ್ಲಿಪ್ತ
ವಾಗಿರುವುದು ದುರದೃಷ್ಟಕರ.

ತಿಂಗಳ ಖರ್ಚಿಗಾಗಿ ಠೇವಣಿ ಮೇಲಿನ ಬಡ್ಡಿಯನ್ನು ಮಾತ್ರ ಅವಲಂಬಿಸಿರುವ ಹಿರಿಯ ನಾಗರಿಕರು ನಿಜವಾಗಿಯೂ ಬವಣೆಪಡುತ್ತಿದ್ದಾರೆ.ಲೋಕಸಭೆ ಚುನಾವಣೆ ದೂರದಲ್ಲಿರುವುದರಿಂದ ಸಣ್ಣ ಉಳಿತಾಯಗಾರರ ಮನ ಗೆಲ್ಲಲು ಸರ್ಕಾರಕ್ಕೆ ಯಾವುದೇ ರಾಜಕೀಯ ಒತ್ತಡವಿಲ್ಲದಿರಬಹುದು.

-ಭರತ್‌ ಬಿ.ಎನ್‌.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT