ಬುಧವಾರ, ಜುಲೈ 6, 2022
22 °C

ವಾಚಕರ ವಾಣಿ| ಹಿಂದಿಯನ್ನು ಮತ್ತೊಮ್ಮೆ ಒಪ್ಪುವುದೇನಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ದೇಶದ ವೈವಿಧ್ಯವನ್ನು ಅರಿತಿದ್ದ ಸಂವಿಧಾನಕರ್ತರು, ಸಂಸದರು ಹಿಂದಿಯನ್ನು ಯಾವ ರಾಜ್ಯದ ಮೇಲೂ ಹೇರಲಿಲ್ಲವೆಂಬ ಸತ್ಯ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ದೊಡ್ಡರಂಗೇಗೌಡರು ಒಂದೆಡೆ, ಕನ್ನಡದ ಅಸ್ಮಿತೆ ಬಗೆಗೆ ಮಾತನಾಡಿದ್ದಾರೆ, ಇನ್ನೊಂದೆಡೆ, ಹಿಂದಿ ಭಾಷೆಯನ್ನು ಏಕೆ ಒಪ್ಪಬಾರದು ಎಂದು ಪ್ರಶ್ನಿಸಿದ್ದಾರೆ. ಒಪ್ಪದಿದ್ದರೆ ತ್ರಿಭಾಷಾ ಸೂತ್ರ ಸಾಧ್ಯವಾಗುತ್ತಿತ್ತೇ? ಕನ್ನಡಿಗರಾದ ನಾವು ಶಾಲಾ ಹಂತದಲ್ಲೇ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಯುತ್ತಿಲ್ಲವೇ? ಹಾಗಿದ್ದರೆ ಒಪ್ಪುವುದೇನಿದೆ? ಭಾಷೆಯ ಆಧಾರದಲ್ಲಿ ಬಾಂಗ್ಲಾದೇಶದಿಂದ ಹಿಡಿದು ಯುರೋಪ್ ರಾಷ್ಟ್ರಗಳವರೆಗೆ ಕ್ರಾಂತಿಯೇ ನಡೆದುಹೋಗಿದೆ.

ರಾಷ್ಟ್ರತ್ವ (ನೇಷನ್‍ಹುಡ್) ಎಂಬ ಪರಿಕಲ್ಪನೆ ಯುರೋಪ್‍ನ ಸಣ್ಣ ರಾಷ್ಟ್ರಗಳಿಗೆ ಅನ್ವಯಿಸಿದಷ್ಟು ಸುಲಭವಾಗಿ ಭಾರತಕ್ಕೆ ಅನ್ವಯಿಸುವುದಿಲ್ಲ. ಭಾರತದ ಅಷ್ಟೂ ಭಾಷೆ, ಪಂಗಡಗಳು ಪರಸ್ಪರ ಮಾರಾಮಾರಿ ನಡೆಸದೆ ಒಟ್ಟಾಗಿ ಜೀವಿಸುತ್ತಿರುವ ಕಾರಣಗಳನ್ನು ಮನಗಾಣಬೇಕು.

- ಶಾಂತರಾಜು ಎಸ್,  ಮಳವಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು