ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಕೇರ್ಸ್‌: ಪಾರದರ್ಶಕತೆ ಅಗತ್ಯ

Last Updated 7 ಅಕ್ಟೋಬರ್ 2021, 15:53 IST
ಅಕ್ಷರ ಗಾತ್ರ

‘ಪಿಎಂ ಕೇರ್ಸ್’ ನಿಧಿಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಕಾರ ಮುಚ್ಚಿಡುವುದು ಸರಿಯಲ್ಲ. ಈ ನಿಧಿ ಸ್ಥಾಪಿಸಿರುವ ಬಗ್ಗೆ ಪ್ರಧಾನಿಯು ಮಾಹಿತಿ ನೀಡಿ, ದೇಣಿಗೆ ನೀಡುವಂತೆ ಮನವಿ ಮಾಡಿದಾಗ ಬಹಳಷ್ಟು ಸಾರ್ವಜನಿಕರು ಮತ್ತು ಉದ್ಯಮ ಸಂಸ್ಥೆಗಳು ಕೋಟಿಗಟ್ಟಲೆ ಹಣ ದೇಣಿಗೆ ನೀಡಿವೆ. ಈ ಹಣ ಕೋವಿಡ್‌ನಂತಹ ಮಹಾಮಾರಿಯ ವಿರುದ್ಧ ಹೋರಾಡಲು ಉಪಯೋಗ ಆಗಬೇಕೆಂಬ ಸದುದ್ದೇಶ ದಾನಿಗಳಿಗೆ ಇತ್ತು. ತಾವು ಕೊಟ್ಟ ಹಣ ಒಳ್ಳೆಯ ಕೆಲಸಕ್ಕೆ ವಿನಿಯೋಗ ಆಗಿದೆ ಎಂದರೆ ಕೊಟ್ಟವರಿಗೆ ಆತ್ಮಸಂತೃಪ್ತಿ ಸಿಗುತ್ತದೆ ಮತ್ತು ಇನ್ನೊಮ್ಮೆ ದೇಣಿಗೆ ನೀಡಲು ಮನಸ್ಸು ಬಯಸುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರೇ ಈ ನಿಧಿಯ ಪದನಿಮಿತ್ತ ಅಧ್ಯಕ್ಷರಾಗಿದ್ದು, ಪ್ರಧಾನಿ ಕಾರ್ಯಾಲಯವೇ ನಿಧಿಯನ್ನು ನಿರ್ವಹಣೆ ಮಾಡುವಾಗ ಪಾರದರ್ಶಕತೆ ಕಾಪಾಡಲೇಬೇಕು. ವಿರೋಧಿಗಳು ಲೆಕ್ಕ ಕೇಳುತ್ತಾರೆ, ಅವರಿಗೇನು ಲೆಕ್ಕ ಕೊಡುವುದು ಎಂಬ ಧೋರಣೆ ಸಲ್ಲ. ಸದುದ್ದೇಶದಿಂದ ಕೊಟ್ಟ ದೇಣಿಗೆಯು ದುರ್ಬಳಕೆ ಆಗಿರಬಹುದೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಲು ಎಡೆ ಮಾಡಿಕೊಡುವುದು ಒಳ್ಳೆಯ ಲಕ್ಷಣ ಅಲ್ಲ.

ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT