ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾದರೂ ತಕ್ಕ ಕ್ರಮ

Last Updated 19 ನವೆಂಬರ್ 2021, 16:47 IST
ಅಕ್ಷರ ಗಾತ್ರ

ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಪ್ರಧಾನಿ ನಿರ್ಧರಿಸಿರುವುದು ತಡವಾಗಿಯಾದರೂ ಕೈಗೊಂಡ ತಕ್ಕ ಕ್ರಮ. ಇದಕ್ಕೆ ಉತ್ತರಪ್ರದೇಶ, ಪಂಜಾಬ್ ವಿಧಾನಸಭಾ ಚುನಾವಣೆ ಕಾರಣ ಇರಬಹುದು. ಉತ್ತರ ಪ್ರದೇಶದಲ್ಲಿ ಮಂಡಿ ಆದಾಯ ಒಂದೇ ವರ್ಷದಲ್ಲಿ ಒಂದು ಸಾವಿರ ಕೋಟಿ ರೂಪಾಯಿಯಷ್ಟು ಕುಸಿದಿದ್ದನ್ನು, ಹೊಸ ಎಪಿಎಂಸಿಗಳ ನಿರ್ಮಾಣವನ್ನು ತಡೆಹಿಡಿದಿರುವುದನ್ನು ಆ ಸರ್ಕಾರವೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿತ್ತು. ಪಂಜಾಬಿನಲ್ಲಿ ಅಕಾಲಿದಳವೂ ಈ ಕಾನೂನುಗಳ ಬಗೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಕರ್ನಾಟಕದ ಎಪಿಎಂಸಿಗಳಿಗೆ ಈಗ ಏನಾಗಿದೆ ಎಂಬ ಬಗ್ಗೆ ‘ಪ್ರಜಾವಾಣಿ’ ವರದಿಗಳನ್ನು ಪ್ರಕಟಿಸಿತ್ತು.

ಕೇಂದ್ರದ ಬಗ್ಗೆ ಸೊಲ್ಲೆತ್ತಲಾಗದ ರಾಜ್ಯದ ಮಂತ್ರಿಗಳು ಈಗಲಾದರೂ ತಮ್ಮ ತಮ್ಮ ಜಿಲ್ಲೆಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯ ನೈಜ ಸ್ಥಿತಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಿ. ಅವರು ಸಮಿತಿ ರಚನೆ ಮಾರ್ಗ ಹಿಡಿಯದೆ ಈಗ ಏನು ಮಾಡಬೇಕೆಂದು ನಿರ್ಧರಿಸಲಿ.

-ಎಚ್.ಎಸ್.ಮಂಜುನಾಥ,ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT