ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಎರಡು ಕಡೆ ಕೆಲಸ

Last Updated 17 ಜನವರಿ 2022, 15:09 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಆದರೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡಿಕೊಂಡು ಎರಡೂ ಕಡೆ ವೇತನ ಪಡೆಯುತ್ತಿರುವವರ ಬಗ್ಗೆ ಹಾಗೂ ಇದರಿಂದ ನೂರಾರು ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಹಳಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಖಂಡನೀಯ.

ಏಕೆಂದರೆ ಮೊದಲನೆಯದಾಗಿ, ಒಬ್ಬ ವ್ಯಕ್ತಿ ಏಕಕಾಲಕ್ಕೆ ಎರಡು ಕಡೆ ಕೆಲಸ ಮಾಡುವುದು ತಾಂತ್ರಿಕವಾಗಿ ಅಸಾಧ್ಯ. ಎರಡನೆಯದಾಗಿ, ಒಬ್ಬನೇ ವ್ಯಕ್ತಿಗೆ ಎರಡು ಕಡೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು ಇನ್ನೊಬ್ಬ ಅರ್ಹ ವ್ಯಕ್ತಿ ‘ಊಟವಿಲ್ಲದೆ ಹಸಿದುಕೊಂಡು ಮಲಗುವಂತೆ ಮಾಡುವುದು’ ಜವಾಬ್ದಾರಿಯುತ ಸರ್ಕಾರ ಹಾಗೂ ಸಮಾಜದ ಲಕ್ಷಣವಲ್ಲ. ಇದು ಸರ್ಕಾರವೇ ಮಾಡುತ್ತಿರುವ ‘ಸಾಮಾಜಿಕ ಅನ್ಯಾಯ’. ಹೀಗಾಗಿ ಸರ್ಕಾರ ಎರಡೂ ಕಡೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ತಕ್ಷಣ ತೆಗೆದುಹಾಕಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ‘ಸಾಮಾಜಿಕ ನ್ಯಾಯ’ ದೊರಕಿಸಲಿ.

–ರಾಜಶೇಖರ ಮೂರ್ತಿ, ಬೆಳಗನಹಳ್ಳಿ, ಎಚ್.ಡಿ.ಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT