ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ತೆರೆಸುವ ರಾಜ್ಯಪಾಲರ ನುಡಿ

Last Updated 13 ಏಪ್ರಿಲ್ 2022, 15:42 IST
ಅಕ್ಷರ ಗಾತ್ರ

‘ಹಿಂದಿಯಲ್ಲಿ ಮಾತನಾಡಿದರೂ ಶಾಂತಿಯಿಂದ ಕೂತಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ನಮ್ಮ ರಾಜ್ಯಪಾಲರು (ಪ್ರ.ವಾ., ಏ. 13). ಅವರ ಈ ನುಡಿ ನೂರಾರು ಅರ್ಥಗಳನ್ನು ಧ್ವನಿಸುತ್ತದೆ. ಅಂದರೆ ಹಿಂದಿಯಲ್ಲಿ ಮಾತನಾಡಿದ ಮಾತುಗಳು ನಿಮಗೆ ಅರ್ಥವಾಗದಿದ್ದರೂ ಶಾಂತಿಯಿಂದ ಕೂತಿದ್ದಕ್ಕೆ ಎಂಬುದು ಒಂದು ಅರ್ಥ. ನಾನು ಈ ರಾಜ್ಯದ ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ನನ್ನ ಮಾತಿನ ಮೂಲಕ ನಿಮ್ಮನ್ನು ತಲುಪಲಾಗದಿದ್ದುದಕ್ಕೆ ಎಂಬುದು ಮತ್ತೊಂದು ಅರ್ಥವಿರಬಹುದು. ಈ ಎರಡೂ ಅಸಹಾಯಕತೆಗಳನ್ನು ಒಳಗೊಂಡ ಒಂದು ಮಾನವೀಯ ಅರ್ಥವೂ ಇನ್ನೊಂದಾಗಿರಬಹುದು. ಒಟ್ಟಿನಲ್ಲಿ ತಮ್ಮ ಹಿಂದಿ ಮಾತಿನ ಮೂಲಕ ಜನರನ್ನು ತಲುಪಲಾಗಲಿಲ್ಲವಲ್ಲ ಎಂಬ ವಿಷಾದವೂ ಇರಬಹುದು. ಹಿಂದಿ ಹೇರಿಕೆ ವಿರುದ್ಧ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಸನ್ನಿವೇಶದಲ್ಲಿಯೇ ರಾಜ್ಯಪಾಲರ ಈ ನುಡಿ ಹಲವರ ಕಣ್ತೆರೆಸುವಂತಿದೆ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT