ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ವ್ಯಕ್ತಿ ಹೇಗಿರಬೇಕು?

Last Updated 14 ಏಪ್ರಿಲ್ 2022, 15:25 IST
ಅಕ್ಷರ ಗಾತ್ರ

ಅನೇಕ ಶಾಲಾ ಕಾಲೇಜುಗಳ ಪ್ರಮುಖ ಸಮಾರಂಭಗಳಿಗೆ ಅತಿಥಿಗಳನ್ನಾಗಿ ರಾಜಕೀಯ ನಾಯಕರು, ಸಿನಿಮಾ ನಟರು ಹಾಗೂ ಸಾಧು ಸಂತರನ್ನು ಕರೆಸುತ್ತಾರೆ. ಅವರಿಂದ ಉನ್ನತ ವಿಚಾರ, ನೈತಿಕತೆ, ಆದರ್ಶದ ನುಡಿಗಳನ್ನು ಕೇಳುತ್ತಾರೆ. ನಮ್ಮ ದೇಶದ ಹಿರಿಮೆ, ಗರಿಮೆ ಬಗ್ಗೆ, ಸತ್ಯ, ಪ್ರಾಮಾಣಿಕತೆಯ ಬಗ್ಗೆ ಅತಿಥಿಗಳು ಮಾತನಾಡುತ್ತಾರೆ. ಆದರೆ ಹೀಗೆ ಮಾತನಾಡುವವರು ಸ್ವತಃ ಜೀವನದಲ್ಲಿ ನಡೆದುಕೊಳ್ಳುವ ರೀತಿ ಇದಕ್ಕಿಂತ ಭಿನ್ನವಾಗಿರುತ್ತದೆ. ಬೆಳಿಗ್ಗೆ ಕೊಟ್ಟ ಹೇಳಿಕೆಯನ್ನು ಸಂಜೆಯ ಹೊತ್ತಿಗೆ ತಾನು ಆ ಹೇಳಿಕೆ ಕೊಟ್ಟೇ ಇಲ್ಲ ಎಂದು ತಿರುಚಿ ಹೇಳುವವರಿದ್ದಾರೆ. ಮಕ್ಕಳು ಇಂತಹ ರಾಜಕೀಯ ನಾಯಕರ ಚಲನವಲನವನ್ನು ಮಾಧ್ಯಮಗಳ ಮೂಲಕ ಗಮನಿಸುತ್ತಿರುತ್ತಾರೆ.

ನಡೆದಂತೆ ನುಡಿಯುವವರು, ನುಡಿದಂತೆ ನಡೆಯುವವರು ಮಾತ್ರ ಆದರ್ಶ ವ್ಯಕ್ತಿಯಾಗಲು ಸಾಧ್ಯ. ಮಕ್ಕಳಿಗಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ಪ್ರವಚನ, ಉದ್ಘಾಟನೆ, ಭಾಷಣಕ್ಕೆ ಅಂತಹ ವ್ಯಕ್ತಿಗಳನ್ನೇ ಕರೆಸುವುದು ಆದರ್ಶಪ್ರಾಯ ನಡೆ.

ಎಂ.ಪರಮೇಶ್ವರ,ಮದ್ದಿಹಳ್ಳಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT