ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳವರು ಟಿಕೆಟ್ ಕೊಳ್ಳುವರು...!

Last Updated 15 ಏಪ್ರಿಲ್ 2022, 15:02 IST
ಅಕ್ಷರ ಗಾತ್ರ

‘ಉಳ್ಳವರು ಟಿಕೆಟ್‌ ಕೊಂಡು ಕೆಜಿಎಫ್‌ 2 ಚಲನಚಿತ್ರ ನೋಡುವರಯ್ಯ, ನಾ ಏನ ಮಾಡಲಿ? ನಾ ಬಡವನಯ್ಯ, ಟೀವಿಯಲ್ಲಿ ಬರುವವರೆಗೂ ಕಾಯಬೇಕಯ್ಯ’ ಎಂದು ಮಧ್ಯಮವರ್ಗದ ಚಲನಚಿತ್ರ ಆಸಕ್ತರು ಪರಿತಪಿಸುವಂತಾಗಿದೆ. ಇದು ಕೇವಲ ಕೆಜಿಎಫ್‌ 2 ಚಿತ್ರ ಮಾತ್ರವಲ್ಲ, ಬಹುತೇಕ ಬಿಗ್ ಬಜೆಟ್ ಚಿತ್ರಗಳ ಕತೆ. ಟಿಕೆಟ್‌ ಬೆಲೆ ₹ 600ರಿಂದ 1000ದವರೆಗೂ ಏರುತ್ತದೆ. ಐದಾರು ಜನ ಇರುವ ಕುಟುಂಬದವರು ಚಿತ್ರ ನೋಡಬೇಕೆಂದರೆ, ಮೂರರಿಂದ ಐದು ಸಾವಿರ ರೂಪಾಯಿಯವರೆಗೆ ವ್ಯಯಿಸಬೇಕು. ವಾರಾಂತ್ಯದಲ್ಲಂತೂ ಕೇಳುವಂತೆಯೇ ಇಲ್ಲ.

ಸಣ್ಣ ಮಕ್ಕಳಿಗೆ ಕನಿಷ್ಠ ಪಾಪ್‌ಕಾರ್ನ್ ಕೊಡಿಸೋಣ ಎಂದರೆ ಹತ್ತು ಪಟ್ಟು ಹೆಚ್ಚಿನ ದರ. ನಂತರ ಊಟ ಅಥವಾ ಉಪಾಹಾರ ಎಂದು ಹೋಟೆಲಿಗೆ ಹೋದರೆ ಅಲ್ಲೂ ದುಬಾರಿ. ಮಾಲ್‌ಗಳಲ್ಲಿರುವ ಹೋಟೆಲುಗಳ ಬೆಲೆ ನೋಡಿದರೆ ಬವಳಿ ಬರುವುದಂತೂ ಖಚಿತ. ಒಂದೆರಡು ವಾರಗಳ ನಂತರ ನೋಡೋಣ ಎಂದರೆ ಅದರ ಕ್ರೇಜ್‌ ಕಡಿಮೆಯಾಗಿರುತ್ತದೆ ಅಥವಾ ಥಿಯೇಟರುಗಳಲ್ಲಿ ಲಭ್ಯ ಇರದು. ಈಪಾಟಿ ಟಿಕೆಟ್‌ ದರ ಇದ್ದರೆ ನಮ್ಮಂತಹ ಮಧ್ಯಮವರ್ಗದವರು ಚಿತ್ರವೀಕ್ಷಿಸುವುದು ಅಸಾಧ್ಯ. ಈ ದಿಸೆಯಲ್ಲಿ ಸರ್ಕಾರ ನಿಗದಿತ ದರ ಗೊತ್ತುಮಾಡಲಿ. ಇಲ್ಲವಾದರೆ ಮನಸೋಇಚ್ಛೆ ದರ ಏರಿಸಿಕೊಳ್ಳುವ ಪ್ರವೃತ್ತಿಗೆ ಕಡಿವಾಣ ಬೀಳದು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT