ವಾಚಕರ ವಾಣಿ: ಗಂಟು ರೋಗ: ಹೆಚ್ಚಿನ ಸ್ಪಂದನ ಅಗತ್ಯ
ಮಧ್ಯ ಕರ್ನಾಟಕದಲ್ಲಿ ದೀಪಾವಳಿ ವಿಶೇಷವೆಂದರೆ, ದನಕರುಗಳನ್ನು ಸಿಂಗರಿಸಿ, ಪೂಜಿಸಿ ಮೆರವಣಿಗೆ ಮಾಡುವುದು. ಹೋರಿಗಳಿಗೆ ಕೊಬ್ಬರಿ ಕಟ್ಟಿ ಪರ್ಸಿಯಲ್ಲಿ (ಹೋರಿಗಳನ್ನು ಬಿಡುವ ಸ್ಥಳ) ಬಿಟ್ಟು ಖುಷಿಪಡುವುದು. ಇನ್ನೂ ವಿಶೇಷವೆಂದರೆ, ಇಂತಹ ಸ್ಪರ್ಧೆಗೆ ಬಹುಮಾನಗಳು ಇರುತ್ತವೆ.
ಈ ಹಬ್ಬವು ಕೊರೊನಾದ ಕರಿಛಾಯೆಯಿಂದ ಈ ಹಿಂದಿನ ಎರಡು ವರ್ಷ ರಂಗು ಕಳೆದುಕೊಂಡಿತ್ತು. ಈಗ ಕೊರೊನಾ ಬಾಧೆ ಇಲ್ಲ. ಆದರೆ ರಾಸುಗಳಿಗೆ ಕಾಣಿಸಿಕೊಂಡ ಗಂಟು ರೋಗವು ಉಲ್ಬಣಿಸುವ ಮೂಲಕ ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಸರ್ಕಾರ ಈಗಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನೂ ಹೆಚ್ಚಿನ ಸ್ಪಂದನ ಅಗತ್ಯ. ಔಷಧೋಪಚಾರವು ತ್ವರಿತವಾಗಿ ಸಿಗುವಂತೆ ಆಗಬೇಕು.
-ಶೈಲಾ ಭ. ಕೊಪ್ಪದ, ಉಪ್ಪುಣಸಿ, ಹಾನಗಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.