ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಕದಡಲು ಕುಮ್ಮಕ್ಕು ನೀಡುವುದು ಬೇಡ

Last Updated 21 ಸೆಪ್ಟೆಂಬರ್ 2022, 16:49 IST
ಅಕ್ಷರ ಗಾತ್ರ

ದ್ವೇಷ ಭಾಷಣ ಮಾಡಿದ ಕೆಲವು ಹಿಂದೂ ಸಂಘಟನೆಗಳ ಪ್ರಮುಖರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಇದು, ದುರದೃಷ್ಟಕರ. ದ್ವೇಷ ಬಿತ್ತುವ ಭಾಷಣ ಮಾಡುವವರಿಗೆ ಇತ್ತೀಚಿನ ದಿನಗಳಲ್ಲಿ ಯಾವ ಭಯವೂ ಇಲ್ಲದಂತಾಗಿದೆ. ನಾಲಗೆ ಮೇಲೆ ನಿಯಂತ್ರಣವಿಲ್ಲದ ಭಾಷಣಕಾರರಿಗೆ ಸರ್ಕಾರದ ಈ ನಿರ್ಧಾರದಿಂದ ಮತ್ತಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಹಾಗಾಗಿ ತನ್ನ ನಿರ್ಧಾರವನ್ನು ಸರ್ಕಾರ ಪುನರ್‌ಪರಿಶೀಲಿಸಬೇಕು.

ಇವರಷ್ಟೇ ಅಲ್ಲ, ವಿವಿಧ ಧರ್ಮಗಳ ಮುಖಂಡರು ಮತ್ತು ರಾಜಕಾರಣಿಗಳು ಕೂಡ ಇಂತಹದ್ದೇ ಭಾಷಣಗಳನ್ನು ಮಾಡಲಾರಂಭಿಸಿದ್ದಾರೆ. ದ್ವೇಷಪೂರಿತ ಹೇಳಿಕೆಗಳಿಂದಲೇ ಕೋಮು ಗಲಭೆಗಳು ನಡೆದು ಜನರ ಆಸ್ತಿ ಪಾಸ್ತಿ ನಷ್ಟವಾಗಿದ್ದಲ್ಲದೆ, ಕೊಲೆಗಳೂ ನಡೆದುಹೋಗಿವೆ. ಸಮಾಜದ ಶಾಂತಿ, ಸಾಮರಸ್ಯವನ್ನು ಕದಡುವ ಇಂತಹ ಭಾಷಣಕಾರರಿಗೆ ತಕ್ಕ ಶಿಕ್ಷೆ ಆಗದಿದ್ದರೆ ಸಮಾಜಕ್ಕೆ ಅಪಾಯ ಖಂಡಿತ. ಅದಕ್ಕೆ ಅವಕಾಶ ಕೊಡಬಾರದು.

-ಅತ್ತಿಹಳ್ಳಿ ದೇವರಾಜ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT