ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಭೀಮ, ದುರ್ಯೋಧನ ಅಪ್ರಸ್ತುತರಲ್ಲ

ಅಕ್ಷರ ಗಾತ್ರ

‘ಭೀಮ, ದುರ್ಯೋಧನ ಸೇರಿ ರಾಮಾಯಣ ಮತ್ತು ಮಹಾಭಾರತದಲ್ಲಿನ ಪಾತ್ರಗಳನ್ನು ಒಳಗೊಂಡ ಪೌರಾಣಿಕ ನಾಟಕಗಳು ಈಗ ಅಪ್ರಸ್ತುತ’ ಎಂದು ಕವಿ ಪ್ರೊ.ನಾರಾಯಣ ಘಟ್ಟ ಹೇಳಿರುವುದು ವರದಿಯಾಗಿದೆ (ಪ್ರ.ವಾ.,ಆ. 3). ಭಾರತೀಯರ ಪಾಲಿಗೆ ಮಹಾಕಾವ್ಯಗಳಾಗಿರುವ ಮಹಾಭಾರತ ಮತ್ತು ರಾಮಾಯಣದಲ್ಲಿನ ಪಾತ್ರಗಳು ಸದಾ ಕಾಲಕ್ಕೂ ಪ್ರಸ್ತುತವೇ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರೂ ಈ ಪಾತ್ರಗಳ ಮೂಲಕ ಕಲಿಯುವುದು ಬಹಳಷ್ಟಿದೆ.

ಈ ಕಾವ್ಯಗಳಲ್ಲಿನ ಪಾತ್ರಗಳ ಮೂಲಕ ಒಳಿತು– ಕೆಡುಕು, ಜೀವನ ಮೌಲ್ಯಗಳನ್ನು ಮನಗಾಣಬಹುದು. ಇವು ಅಪ್ರಸ್ತುತವಾಗಿದ್ದರೆ ಎಂದೋ ಇವು ಜನಮಾನಸದಿಂದ ಕಣ್ಮರೆಯಾಗಬೇಕಿತ್ತು. ಆದರೆ, ಜನಪದರಿಂದ ಹಿಡಿದು ಇಂದಿನವರೆಗೆ ಈ ಕಾವ್ಯಗಳು ಇನ್ನೂ ಜನರ ನಾಲಿಗೆಯ ಮೇಲಿರುವುದೇ ಅವುಗಳ ಪ್ರಸ್ತುತತೆಗೆ ಸಾಕ್ಷಿ.

- ರಾಘವೇಂದ್ರ ಎಚ್.,ಕುಕ್ಕವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT