ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸಾರ್ವಜನಿಕ ಸಾರಿಗೆ ಎಲ್ಲೆಡೆ ಪ್ರಾರಂಭವಾಗಲಿ

ಅಕ್ಷರ ಗಾತ್ರ

ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ತೆರಳಲು ಹೆಚ್ಚಿಗೆ ಬಸ್‌ಗಳನ್ನೇ ಅವಲಂಬಿಸಿರುತ್ತಾರೆ. ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ ಇದ್ದುಕೊಂಡು ನಗರಗಳಿಗೆ ಹೋಗಿ ಕೆಲಸ ಮಾಡುವವರು, ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಸಲುವಾಗಿ ರೈತರು, ವ್ಯಾಪಾರಿಗಳು ಊರಿಂದ ಊರಿಗೆ ಪ್ರಯಾಣ ಮಾಡಲು ಬಸ್‌ಗಳನ್ನೇ ನಂಬಿರುತ್ತಾರೆ. ಆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ ಜನಜೀವನ ಸಹಜಸ್ಥಿತಿಗೆ ಬಂದಿದ್ದರೂ ಖಾಸಗಿ ಸಾರಿಗೆ ವ್ಯವಸ್ಥೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ.

ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವೆಡೆ ಬಸ್‌ ಓಡಿಸಿದರೆ ಆರ್ಥಿಕ ನಷ್ಟ ಎದುರಾಗುತ್ತದೆ ಎಂದು ಸೇವೆ ಒದಗಿಸಲು ಖಾಸಗಿ ಬಸ್‌ ಮಾಲೀಕರು ಹಿಂದೆಮುಂದೆ ನೋಡುತ್ತಾರೆ. ಆದರೆ ಸರ್ಕಾರಿ ಸಾರಿಗೆಯ ಮೂಲ ಉದ್ದೇಶ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದೇ ಆಗಿರುತ್ತದೆ. ಹೀಗಾಗಿ ಸರ್ಕಾರ ರಾಜ್ಯದಾದ್ಯಂತ ಆದಷ್ಟು ಬೇಗ ಸರ್ವೆ ಮಾಡಿಸಿ, ಎಲ್ಲೆಲ್ಲಿ ಅವಶ್ಯಕವೋ ಅಲ್ಲೆಲ್ಲ ಸರ್ಕಾರಿ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಕೊಡಬೇಕು.

-ಹರವೆಸಂಗಣ್ಣಪ್ರಕಾಶ್, ಹರವೆ, ಚಾಮರಾಜನಗರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT