ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪ್ರತ್ಯೇಕ ಕಾರಾಗೃಹ ನಿರ್ಮಿಸಬೇಕಾದೀತು

ಅಕ್ಷರ ಗಾತ್ರ

ತುಮಕೂರು ಸಂಸದ ಜಿ.ಎಸ್.ಬಸವರಾಜ್ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡು ಛೀ... ಥೂ... ಎನ್ನುವ ಮಟ್ಟಕ್ಕೆ ಹೋಗಿದ್ದು ಜನಪ್ರತಿನಿಧಿಗಳ ಇನ್ನೊಂದು ಮುಖವನ್ನು ಜನರ ಮುಂದೆ ತೆರೆದಿಟ್ಟಿದೆ. ಚುನಾವಣೆಗೆ ಮೊದಲು ಆಶ್ವಾಸನೆ ನೀಡುತ್ತಾ, ಆಣೆ, ಪ್ರಮಾಣ ಹಾಕುತ್ತಾ, ಎಲ್ಲ ಹಂತದಲ್ಲಿಯೂ ಪ್ರಾಮಾಣಿಕವಾಗಿ ಮತ್ತು ಗೌರವಯುತವಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳುವ ರಾಜಕಾರಣಿ ಗಳು, ಆಯ್ಕೆಯಾದ ನಂತರ ತಮ್ಮ ನಾಲಿಗೆಯನ್ನು ಹರಿಬಿಟ್ಟು ಏಕವಚನದಲ್ಲಿ ಬೈದಾಡಿಕೊಂಡು ಅನಾಗರಿಕರ ರೀತಿಯಲ್ಲಿ ವರ್ತಿಸುತ್ತಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ತರುವ ವಿಷಯದಲ್ಲಿ ಪರಸ್ಪರರು ತಮ್ಮನ್ನು ಒರೆಗಲ್ಲಿಗೆ ಹಚ್ಚಿಕೊಂಡು ಮತದಾರನ ಮುಂದೆ ಬೆತ್ತಲಾಗಿದ್ದಾರೆ.

ಈಗಾಗಲೇ ರಾಜಕೀಯದಲ್ಲಿ ಹಣಬಲ, ತೋಳ್ಬಲ ಮತ್ತು ಕ್ರಿಮಿನಲ್ ಆರೋಪ ಹೊತ್ತವರ ಸಂಖ್ಯೆ ಹೆಚ್ಚಾಗಿದ್ದು, ಅವುಗಳ ವಿಚಾರಣೆಗಾಗಿಯೇ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲಾಗಿದೆ. ಇದೇ ರೀತಿ ಮುಂದುವರಿದರೆಅವರಿಗಾಗಿಯೇ ಪ್ರತ್ಯೇಕ ಕಾರಾಗೃಹ ನಿರ್ಮಿಸಬೇಕಾಗಬಹದು. ಇಂತಹ ಸಂಸ್ಕೃತಿಯನ್ನು ಮತದಾರರು ಚುನಾವಣೆ ಯಲ್ಲಿ ಕೊನೆಗಾಣಿಸದಿದ್ದರೆ ಪ್ರಜಾಪ್ರಭುತ್ವದ ಅಡಿಪಾಯವೇ ಅಲುಗಾಡುತ್ತದೆ.

- ಗಣಪತಿ ನಾಯ್ಕ್,ಕಾನಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT