ಯಾರು ದೊಡ್ಡವರು?

7

ಯಾರು ದೊಡ್ಡವರು?

Published:
Updated:

ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಭಾರತಕ್ಕೆ ಬಂದರೆ, ಅವರನ್ನಿಡುವ ಜೈಲು ಕೋಣೆಯ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಲಂಡನ್ನಿನ ನ್ಯಾಯಾಲಯಕ್ಕೆ ಸಿ.ಬಿ.ಐ. ಸಲ್ಲಿಸಿದೆ 
(ಪ್ರ.ವಾ., ಆ. 25). ಇಂಥದ್ದೇ ಆರೋಪ ಒಬ್ಬ ಸಾಮಾನ್ಯನ ಮೇಲಿದ್ದರೆ ಕಾನೂನು ನಿರ್ದಯವಾಗಿ ತನ್ನ ಕಾಲಿನಿಂದ ತುಳಿದು ಹೊಸಕಿ ಹಾಕುತ್ತಿರಲಿಲ್ಲವೇ?

‘ವ್ಯಕ್ತಿಗಿಂತ ಕಾನೂನು ದೊಡ್ಡದು’ ಎಂದು ನಮ್ಮ ಸಂವಿಧಾನ ಸಾರುತ್ತದೆ! ಇದನ್ನು ನಾವೆಲ್ಲರೂ ಒಪ್ಪಿ ನಡೆಯುತ್ತಿದ್ದೇವೆ. ಮಲ್ಯ ಅವರನ್ನು ಭಾರತಕ್ಕೆ ಕರೆತರುವಲ್ಲಿ ಅಥವಾ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ
ಕೊಂಡು ಅವರು ಪಡೆದ ಸಾಲವನ್ನು ಹಿಂಪಡೆವಲ್ಲಿ ಕಾನೂನು ಯಶ್ವಸಿಯಾಗಿಲ್ಲ. ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಾನೂನು ದೊಡ್ಡದೋ ಅಥವಾ ವ್ಯಕ್ತಿ ದೊಡ್ಡವನೋ ಎಂಬ ಸಂದೇಹ ಮೂಡುತ್ತದೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !