ಅಪಸ್ವರ ಸಲ್ಲದು

7

ಅಪಸ್ವರ ಸಲ್ಲದು

Published:
Updated:

ಈ ಬಾರಿಯ ನಾಡಹಬ್ಬ ದಸರಾದ ಉದ್ಘಾಟನೆಗೆ ಸುಧಾ ಮೂರ್ತಿ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ.

ಸುಧಾ ಅವರು ಉದ್ಯಮಿಯಾಗಿದ್ದರೂ ಸರಳ ವ್ಯಕ್ತಿತ್ವದ ಮೂಲಕ ಜನಸಾಮಾನ್ಯರಲ್ಲಿ ಬೆರೆತು ಅವರ ಪ್ರೀತಿ– ವಿಶ್ವಾಸಗಳನ್ನು ಗಳಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಅವರನ್ನು ವಿರೋಧಿಸುತ್ತಿರುವವರು ತಮ್ಮ ವಿರೋಧಕ್ಕೆ ನೀಡುವ ಕಾರಣಗಳು ಸರಿಯೆನಿಸುವುದಿಲ್ಲ. ಪ್ರತಿ ಬಾರಿಯೂ ರಾಜಕಾರಣಿಗಳು ಅಥವಾ ಬೇರೆಬೇರೆ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಿ ದಸರಾ ಹಬ್ಬವನ್ನು ಉದ್ಘಾಟಿಸಲಾಗುತ್ತದೆ. ಸುಧಾ ಅವರು ಜನಸಾಮಾನ್ಯರಂತೆ ಇರುವುದರಿಂದ ಅವರು ಉದ್ಘಾಟಿಸಿದರೆ ಸಾಮಾನ್ಯ ವ್ಯಕ್ತಿಗೆ ಅವಕಾಶ ಸಿಕ್ಕಿದಂಥ ಭಾವನೆ ಮೂಡುತ್ತದೆ. ಇದು ಒಳ್ಳೆಯ ಬೆಳವಣಿಗೆಯೇ.

ಆದರೆ ಒಂದು ವಿಚಾರ; ಈ ಬಾರಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಹಬ್ಬವನ್ನು ಸರಳವಾಗಿ‌ ಆಚರಿಸುವುದು ಸೂಕ್ತ.

 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !