ಇಲಾಖೆ ಸುತ್ತ ಬೇಲಿ!

7

ಇಲಾಖೆ ಸುತ್ತ ಬೇಲಿ!

Published:
Updated:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಾದದ ಬಗ್ಗೆ ಒಂದು ವಾರದಿಂದ ವರದಿಯಾಗುತ್ತಿದೆ.

ವ್ಯಕ್ತಿಗಳಿಗೆ, ವ್ಯಕ್ತಿಕೇಂದ್ರಿತ ಸಂಘಟನೆಗಳಿಗೆ ಕನ್ನಡ ಹಾಗೂ ಜಾನಪದ, ಕಲೆ, ಸಂಸ್ಕೃತಿ ಹೆಸರಿನಲ್ಲಿ ವಾರ್ಷಿಕವಾಗಿ ಇಲಾಖೆಯಿಂದ ಲಕ್ಷಾಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸದರಿ ಯೋಜಿತ ಕಾರ್ಯಕ್ರಮಗಳ ಅನುಷ್ಠಾನ, ವರದಿ, ಲೆಕ್ಕಪತ್ರ ಹಾಗೂ ಇತರೆ ವಿಚಾರಗಳ ಬಗ್ಗೆ ಈಗ ವಿವಾದವೆದ್ದಿದೆ.

ಕಲೆ, ಸಂಸ್ಕೃತಿ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಯಾಗಿ ನನ್ನ ಅನುಭವಕ್ಕೆ ಬಂದ ಕೆಲ ವಿಚಾರಗಳನ್ನು ಮುಂದಿಡುತ್ತಿದ್ದೇನೆ. ಸಂಗೀತ, ಸಂಸ್ಕೃತಿ, ಕಲೆಗಳಿಗೆ ಜಾತಿ, ಧರ್ಮ, ಗಡಿ ಮುಂತಾದ ನಿರ್ಬಂಧಗಳಿಲ್ಲ, ಅವು ಮುಕ್ತವಾಗಿವೆ ಎಂದು 
ಗೌರವಿಸುವವರು ನಾವು. ಆದರೆ ಇಲಾಖೆಯೇ ಜಾತಿಯ, ಪ್ರಭಾವಿಗಳ, ವರ್ಚಸ್ಸಿನ ಮುಲಾಜಿಗೆ ಬಿದ್ದು ಕಲೆ, ಸಂಸ್ಕೃತಿಯನ್ನು ಹೀಗೆ ಬಿಕರಿ ಮಾಡುತ್ತಿರುವುದು ವಿಷಾದನೀಯ.

ಲೆಕ್ಕಭರ್ತಿಗಾಗಿ, ಜಾತಿ, ಪ್ರಭಾವಿಗಳ ಹಂಗಿನಲ್ಲಿ ಕಲೆ– ಸಾಂಸ್ಕೃತಿಕ ಚಟುವಟಿಕೆಗಳನ್ನು ವ್ಯಾಪಾರೀಕರಣ ಮಾಡಿ ತಮಗೆ ಬೇಕಾದವರಿಗೆಲ್ಲಾ ಲಕ್ಷ ಲಕ್ಷ ಹಣ ಬಿಡುಗಡೆ ಮಾಡುತ್ತಿರುವ ಇಲಾಖೆಯು ತನ್ನ ಸುತ್ತಲೂ ಬೇಲಿ ಹಾಕಿಕೊಂಡಿ
ರುವುದು ನಾಡಿನ ಕಲೆ, ಸಂಸ್ಕೃತಿಗಳ ಅಳಿವಿಗೆ ಕಾರಣವಾಗಬಹುದೆಂಬ ಅಭಿಪ್ರಾಯ ಉತ್ಪ್ರೇಕ್ಷೆಯಾಗದು. ಈಗ ನಡೆಯುತ್ತಿರುವ ಚರ್ಚೆಯಿಂದಲಾದರೂ ಇಲಾಖೆಯು ಎಚ್ಚೆತ್ತುಕೊಳ್ಳದಿದ್ದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುವುದಂತೂ ನಿಶ್ಚಿತ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !