ಇಂಧನ ಅಪವ್ಯಯ ತಪ್ಪಿಸಿ

7

ಇಂಧನ ಅಪವ್ಯಯ ತಪ್ಪಿಸಿ

Published:
Updated:

ಡೀಸೆಲ್ ದರ ಏರಿಕೆಯ ಕಾರಣದಿಂದ ಸರ್ಕಾರಿ ಬಸ್‌ ಪ್ರಯಾಣ ದರ ಹೆಚ್ಚಿಸುವ ಕುರಿತು ಚಿಂತನೆ ನಡೆದಿರುವುದು ವರದಿಯಾಗಿದೆ. ಬಹುಪಾಲು ಇಂಧನವನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಅದರ ಬೆಲೆ ನಮಗೆ ತಿಳಿದಿಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳು ಸಿಗುತ್ತವೆ.

ನಗರಗಳ ಬಸ್ ನಿಲ್ದಾಣಗಳಲ್ಲಿ, ಗ್ರಾಮೀಣ ಪ್ರದೇಶಗಳ ತಂಗುದಾಣಗಳಲ್ಲಿ, ರಸ್ತೆಗಳ ಚೌಕಿಗಳಲ್ಲಿ ಬಸ್‌ಗಳು ಕೆಲವು ಸಂದರ್ಭಗಳಲ್ಲಿ 5ರಿಂದ 10 ನಿಮಿಷ ನಿಂತುಕೊಳ್ಳುತ್ತವೆ. ಆಗ ನಮ್ಮ ಚಾಲಕರು ಎಂಜಿನ್ ಬಂದ್ ಮಾಡಬಹುದು. ಆದರೆ ಹಾಗೆ ಮಾಡುವುದಿಲ್ಲ. ಅದರಿಂದ ಅಮೂಲ್ಯ ಇಂಧನ ಪೋಲಾಗುತ್ತದೆ.

ಇದು ದಿನನಿತ್ಯ ಆಗುವ ಪೋಲು. ಶೇ 20 ರಷ್ಟು ಇಂಧನ ಈ ರೂಪದಲ್ಲಿ ಅಪವ್ಯಯವಾಗುತ್ತಿದೆ. ಇದನ್ನು ತಪ್ಪಿಸುವುದರಿಂದ ಸಂಸ್ಥೆಯ ವೆಚ್ಚ ತಗ್ಗಿಸಬಹುದು. ನಷ್ಟ ಇಳಿಸಬಹುದು. ಸಂಬಂಧಪಟ್ಟವರು ಯಾಕೆ ಈ ಬಗ್ಗೆ ಯೋಚಿಸುತ್ತಿಲ್ಲ? ನಿಲ್ದಾಣ, ತಂಗುದಾಣಗಳಲ್ಲಿ ಬಸ್‌ ನಿಂತ ಸಂದರ್ಭದಲ್ಲಿ ಎಂಜಿನ್‌ ಅನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಆದೇಶ ಮಾಡಬೇಕು. ಇಂಧನದ ಅಪವ್ಯಯ ಹಾಗೂ ಬೇರೆ ಬೇರೆ ರೂಪದಲ್ಲಿ ಆಗುವ ಸೋರಿಕೆ ತಪ್ಪಿಸಿದರೆ ಪ್ರಯಾಣ ದರ ಏರಿಸುವ ಪ್ರಮೇಯ ಬರಲಾರದು.

–ಬಸವರಾಜ ಹುಡೇದಗಡ್ಡಿ, ಬೆಂಗಳೂರು

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !