ನೋಟು ನಿರ್ವಹಣೆ...

7

ನೋಟು ನಿರ್ವಹಣೆ...

Published:
Updated:

ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಮೂಲಕ ರೋಗಗಳು ಹರಡುವ ಸಾಧ್ಯತೆ ಇದೆ ಎಂಬ ವರದಿ ಓದಿ ಚಕಿತಗೊಂಡೆ. ಜಗತ್ತಿನಲ್ಲಿ ಭಾರತದಲ್ಲಿಯೇ ಅತೀ ಹೆಚ್ಚು  ನೋಟುಗಳು ಚಲಾವಣೆಯಾಗುತ್ತಿವೆ.

ಎಲ್ಲಾ ವ್ಯವಹಾರಗಳು ಈಗಲೂ ಹೆಚ್ಚಾಗಿ ಹಣದ ಮೂಲಕವೇ ನಡೆಯುತ್ತಿರುವುದು ಇದಕ್ಕೆ ಕಾರಣ. ನೋಟುಗಳ ಮೂಲಕ ಹರಡುವ ಸೋಂಕುಗಳ ಬಗ್ಗೆ ಐ.ಜಿ.ಐ.ಬಿ. (Institute of Genomics & Integrative Biology) ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. 28 ವಿವಿಧ ರೋಗಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳು ನೋಟುಗಳಲ್ಲಿ ಪತ್ತೆಯಾಗಿವೆ ಎಂದೂ ಹೇಳಿದೆ.

ರೋಗ ಹರಡುವ ಸಾಧ್ಯತೆ ಬಗ್ಗೆ ತಿಳಿಸಿರುವುದು ಒಳ್ಳೆಯದೇ. ಆದರೆ ಅದಕ್ಕಿಂತ ಮುಖ್ಯವಾದುದು ಸೋಂಕು ಹರಡುವಿಕೆ ತಡೆಯುವುದು. ಈ ಬಗ್ಗೆ ಅಧ್ಯಯನ, ಮುತುವರ್ಜಿ ಮತ್ತು ಕ್ರಮ ಅಗತ್ಯ. ಕಡ್ಡಾಯವಾಗಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಪಾಲಿಸದಿರುವುದೇ ನೋಟುಗಳ ಮೂಲಕ ರೋಗ ಹರಡಲು ಕಾರಣವಾಗಿದೆ. ಬ್ಯಾಂಕುಗಳಲ್ಲಿ ಕ್ಯಾಶ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಪ್ಪದೇ ಮಾಸ್ಕ್ ಧರಿಸಬೇಕು.

ನೋಟುಗಳನ್ನು ಚಲಾವಣೆ ಯೋಗ್ಯ, ಮಾಸಿದ ನೋಟುಗಳು, ತುಂಡಾದ ನೋಟುಗಳು, ಎ.ಟಿ.ಎಂ.ಗಳಲ್ಲಿ ಬಳಸಲು ಯೋಗ್ಯವಾದ ನೋಟುಗಳು ಮತ್ತು ಖೋಟಾ ನೋಟುಗಳೆಂದು ವರ್ಗೀಕರಿಸಬೇಕು. ಚಲಾವಣೆಗೆ ಯೋಗ್ಯವಲ್ಲದ ನೋಟುಗಳನ್ನು ಯಾವ ಕಾರಣಕ್ಕೂ ಪೇಮೆಂಟ್‌ಗಳಿಗೆ ಬಿಡುಗಡೆ ಮಾಡಕೂಡದು.

ಕರೆನ್ಸಿ ಚೆಸ್ಟ್ (ಬ್ಯಾಂಕ್‍ಗಳಲ್ಲಿ ಆರ್.ಬಿ.ಐ. ಕ್ಯಾಶ್ ಇಡುವ ಸ್ಥಳ) ಮತ್ತು ವಾಲ್ಟ್‌ಗಳಲ್ಲಿ ತಿಂಗಳಿಗೊಮ್ಮೆಯಾದರೂ ಕ್ರಿಮಿನಾಶಕ ದ್ರವ ಸಿಂಪಡಿಸುವುದು ಕಡ್ಡಾಯ. ಆದರೆ ಅದನ್ನು ಪಾಲಿಸುತ್ತಿಲ್ಲ. ಕನಿಷ್ಠ ಮೂರು ತಿಂಗಳಿಗೊಮ್ಮೆ ಹಳೆಯ ನೋಟುಗಳನ್ನು ಆರ್.ಬಿ.ಐ.ಗೆ ಕಳಿಸಿಕೊಡಬೇಕು. ಬದಲಾಗಿ ಆರ್.ಬಿ.ಐ. ಹೊಸ ಅಥವಾ ಇಶ್ಯುಯೆಬಲ್ ನೋಟುಗಳ ವ್ಯವಸ್ಥೆ ಮಾಡುತ್ತಿರಬೇಕು. ನೋಟುಗಳ ಎಣಿಕೆ ಮುಗಿದ ನಂತರ ತಪ್ಪದೇ ಡೆಟಾಲ್‌ನಂತಹ ಕ್ರಿಮಿನಾಶಕ ಅಂಶಗಳಿರುವ ದ್ರವಗಳಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಎಣಿಸಲು ಬಳಸುವ ಕ್ರಿಮಿನಾಶಕ ಸಿಂಪಡಿಸಿದ ಸ್ಪಾಂಜ್‍ಗಳನ್ನು ಪ್ರತಿನಿತ್ಯವೂ ಬದಲಿಸಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ನೋಟುಗಳ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು.

-ಪಂಪಾಪತಿ ಹಿರೇಮಠ, ಧಾರವಾಡ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !