ಇಂಧನ ಅಪವ್ಯಯ ತಪ್ಪಿಸಿ

7

ಇಂಧನ ಅಪವ್ಯಯ ತಪ್ಪಿಸಿ

Published:
Updated:

ತಮಿಳು ಚಲನಚಿತ್ರವೊಂದು ಕನ್ನಡದಲ್ಲಿ ಡಬ್ ಆಗಿ ‘ಕಮಾಂಡೊ’ ಹೆಸರಿನಲ್ಲಿ ಇತ್ತೀಚೆಗೆ ರಾಜ್ಯದಾದ್ಯಂತ ತೆರೆಕಂಡಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್‍ ಅವರು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅವರನ್ನು ಭೇಟಿಯಾಗಿ, ಡಬ್ಬಿಂಗ್ ಚಿತ್ರಗಳ ನಿಷೇಧಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಡಬ್ಬಿಂಗ್ ಸಿನಿಮಾಗಳು ಬರಲಿ ಮತ್ತು ಕನ್ನಡಿಗರಿಗೆ ಎಲ್ಲಾ ಬಗೆಯ ಮನರಂಜನೆ ಕನ್ನಡದಲ್ಲೇ ಸಿಗಲಿ ಎನ್ನುವುದು ಕೆಲವರ ನಿಲುವು. ಇನ್ನು ಕೆಲವರು ಇದನ್ನು ಕನ್ನಡಕ್ಕೆ ಮಾರಕ ಎಂದು ಬಿಂಬಿಸುತ್ತಿದ್ದಾರೆ.

ಹಿಂದೊಮ್ಮೆ ಕರ್ನಾಟಕದಲ್ಲಿ ಕನ್ನಡೇತರ ಚಿತ್ರಗಳು ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದವು. ಇಂದು ಪರಿಸ್ಥಿತಿ ಬದಲಾಗಿದೆ. ಕನ್ನಡ ಸಿನಿಮಾಗಳು ತೆರೆಕಾಣುವ ಚಿತ್ರಮಂದಿರಗಳ ಸಂಖ್ಯೆಯನ್ನು ಅವು ಇಳಿಸಿವೆ. ಜಾಗತೀಕರಣದ ಹೆಬ್ಬಾಗಿಲು ತೆರೆದಿದೆ. ವಿದೇಶಿ ಮತ್ತು ಭಾರತದ ಇತರ ಭಾಷೆಗಳ ಸಿನಿಮಾಗಳು ಕನ್ನಡೇತರ ಭಾಷೆಗಳಲ್ಲೇ ಕನ್ನಡದ ಜನರಿಗೆ ಮನರಂಜನೆ ಉಣಬಡಿಸುತ್ತಿವೆ.

ಈ ಮನರಂಜನೆ ನಮಗೆ ಕನ್ನಡದಲ್ಲಿ ಸಿಗುವಂತೆ ಮಾಡುವ ಡಬ್ಬಿಂಗ್ ಕಲೆ, ಕನ್ನಡ ಉಳಿಸುವ ಒಂದು ಸಾಧನವಾಗಿ ನನಗೆ ಗೋಚರಿಸುತ್ತದೆ. ಡಬ್ಬಿಂಗ್ ಮಾರಕವೆಂಬ ವಾದವೇ ಕನ್ನಡಕ್ಕೆ ಮಾರಕವಾಗುತ್ತಿರುವುದು ವಿಪರ್ಯಾಸವಾಗಿದೆ!

ಇವೆಲ್ಲದರ ಹೊರತಾಗಿ ಡಬ್ಬಿಂಗ್ ಸಿನಿಮಾ ನೋಡುವುದು, ನೋಡದೇ ಇರುವುದು, ಗೆಲ್ಲಿಸುವುದು, ಸೋಲಿಸುವುದು ಪ್ರೇಕ್ಷಕನ ವಿವೇಚನೆಗೆ ಬಿಟ್ಟ ವಿಚಾರ.  ನೋಡುಗನ ಹಕ್ಕನ್ನೇ ಕಸಿಯುವ ಪ್ರಯತ್ನ ಪ್ರಜಾಪ್ರಭುತ್ವದ ಆಶಯಗಳಿಗೆ ವಿರೋಧವಾದುದು. ಡಬ್ಬಿಂಗ್ಅನ್ನು ವಿರೋಧಿಸುತ್ತಿರುವವರು ಈ ಅಂಶವನ್ನು ಅರಿಯಬೇಕಿದೆ!

-ವಿಜಯ್ ಕಲ್ಯಾಣ ರಾಮನ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !