ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವತಂತ್ರ ಧರ್ಮ’ ಲಿಂಗಾಯತ ಧರ್ಮದ ಅಸ್ಮಿತೆಯ ಪ್ರಶ್ನೆ

Last Updated 19 ಅಕ್ಟೋಬರ್ 2018, 19:54 IST
ಅಕ್ಷರ ಗಾತ್ರ

ಸ್ವತಂತ್ರ ಧರ್ಮ ಮಾನ್ಯತೆಗಾಗಿ ಲಿಂಗಾಯತರು ಹೋರಾಟ ಮಾಡಿದ್ದರಿಂದ ಮತ್ತು ಅದಕ್ಕೆ ಕಾಂಗ್ರೆಸ್‌ ಮುಖಂಡರು ಕೆಲವರು ಬೆಂಬಲ ಸೂಚಿಸಿದ್ದರಿಂದ ಉತ್ತರ ಕರ್ನಾಟಕದಲ್ಲಿ ಆ ಪಕ್ಷಕ್ಕೆ ಲಾಭವೇ ಆಗಿದೆ. ಅಧಿಕಾರಕ್ಕೇರುವ ಅವಕಾಶ ಬಿಜೆಪಿಗೆ ಕೈತಪ್ಪಲು ಈ ವಿಷಯದಲ್ಲಿ ಅದರ ನಿಲುವು ಕೂಡ ಒಂದು ಕಾರಣ.

ವೀರಶೈವ– ಲಿಂಗಾಯತ ಒಂದೇ ಎನ್ನುವ ಭಾವನೆ ಕೆಲವು ಸಚಿವರಲ್ಲಿದೆ. ಅದು ತಪ್ಪು. ರಾಜಕಾರಣಿಗಳು ಈ ಬಗ್ಗೆ ಹೇಳಿಕೆ ಕೊಡಲು ಅವರೇನು ಸಿದ್ಧಾಂತ, ಸಾಹಿತ್ಯಗಳನ್ನು ಓದಿರುವ ನಿಪುಣರೇ?

ಸ್ವತಂತ್ರ ಧರ್ಮ ಮಾನ್ಯತೆಗಾಗಿ ಲಿಂಗಾಯತರು ಅಪಾರ ಸಂಖ್ಯೆಯಲ್ಲಿ ಧ್ವನಿ ಎತ್ತಿದ್ದಾರೆ. ಈ ಹೋರಾಟ ಮುಂದುವರಿಯುತ್ತದೆ. ಇದು ಕಾಂಗ್ರೆಸ್, ಬಿಜೆಪಿ ಅಥವಾ ಇತರೆ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಇದು, ಲಿಂಗಾಯತ ಧರ್ಮದ ಅಸ್ಮಿತೆಯ ಪ್ರಶ್ನೆಯಾಗಿದೆ.

–ಎಸ್.ಪಿ. ನಾಡಗೌಡರ್, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT