ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರರು ಯಾರು?

Last Updated 7 ನವೆಂಬರ್ 2018, 20:28 IST
ಅಕ್ಷರ ಗಾತ್ರ

ಬ್ರಿಟಿಷರು ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿ, ಎಲ್ಲಾ ಸಂಸ್ಥಾನಿಕರನ್ನು, ಆಳರಸರನ್ನು ಸದೆಬಡಿಯುತ್ತಾ ಇಡೀ ಭಾರತದ ಆಡಳಿತವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲಾರಂಭಿಸಿದರು.

ಇವರ ಆಡಳಿತ ನೀತಿಯನ್ನು ಪ್ರತಿಭಟಿಸಿ, ಅನೇಕ ಆಳರಸರು ಯುದ್ಧ ಮಾಡಿದರು. ಹೀಗೆ ಯುದ್ಧ ಮಾಡಿ ಮಡಿದವರಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ಚನ್ನಮ್ಮ ಹಾಗೂ ಟಿಪ್ಪು ಸುಲ್ತಾನ್‌ ಹೆಸರು ಪ್ರಮುಖವಾಗಿ ಇತಿಹಾಸದಲ್ಲಿ ದಾಖಲಾಗಿವೆ. ಈ ಮೂವರ ಕಾಲ ಕ್ರಿ.ಶ. 1900ಕ್ಕಿಂತ ಮೊದಲು.

ಈ ಮೂವರು ದಿಟ್ಟತನದಿಂದ ಹೋರಾಡಿದ್ದು ನಿಜ. ಈ ಮೂವರೂ ಹೋರಾಡಿದ್ದು ಇಡೀ ಭಾರತದೇಶ (ಜನತೆ) ಸ್ವತಂತ್ರವಾಗಲಿ ಎಂಬ ಉದ್ದೇಶದಿಂದ ಅಲ್ಲ! ತಮ್ಮ ಅರಸೊತ್ತಿಗೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಕ್ರಿ.ಶ. 1900ರಿಂದ ಮುಂದಿನ ಕಾಲವನ್ನು, ಇಲ್ಲಿ ಗಾಂಧಿಯುಗ ಎಂದು ಭಾವಿಸೋಣ. ಕ್ರಿ.ಶ. 1930ರ ಸುಮಾರು, ಅನೇಕ ಪ್ರತಿಭಟನಕಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಚಂದ್ರಶೇಖರ ಆಜಾದ್‌ರಂಥವರು ಹುತಾತ್ಮರಾದರು. ಇಲ್ಲಿಂದ ಗಾಂಧಿ, ನೆಹರೂ, ವಲ್ಲಭಭಾಯ್‌ ಪಟೇಲ್‌, ತಿಳಕ್‌ ಮುಂತಾದವರ ಮುಂದಾಳತ್ವದಲ್ಲಿ, ದೇಶದ ತುಂಬಾ ಸ್ವಾತಂತ್ರ್ಯ ಹೋರಾಟ ಉಗ್ರರೂಪ ತಾಳಿತು. ಈ ಹೋರಾಟದಲ್ಲಿ ಭಾಗಿಯಾದವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು.

ಇತಿಹಾಸವನ್ನು ಸರಿಯಾಗಿ ತಿಳಿಯದವರು, ತಮ್ಮ ಅರಸೊತ್ತಿಗೆಯನ್ನು ಉಳಿಸಿಕೊಳ್ಳಲು ಹೋರಾಡಿದವರನ್ನು ‘ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರು’ ಎಂದು ಕೂಗುತ್ತಾ, ಅವರ ಜಯಂತಿ ಆಚರಣೆಗೆ ಮುಂದಾಗಿದ್ದಾರೆ! ಒಂದು ವೇಳೆ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಝಾನ್ಸಿ ರಾಣಿ, ಚನ್ನಮ್ಮ, ಟಿಪ್ಪು ಮೇಲುಗೈ ಸಾಧಿಸಿದ್ದರೆ, ನಾವೆಲ್ಲರೂ ಇವರ ಸಂತತಿಗಳ ಆಳ್ವಿಕೆಯಲ್ಲಿ ಇಂದು ಗುಲಾಮರಾಗಿ ಬದುಕುತ್ತಿದ್ದೆವು. 1947ರಲ್ಲಿ ಭಾರತ ಸ್ವತಂತ್ರ ಪಡೆಯುತ್ತಿರಲಿಲ್ಲ.

-ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT