ಹಜಾರೆಗೆ ಬೇಕು ಬೆಂಬಲ

7

ಹಜಾರೆಗೆ ಬೇಕು ಬೆಂಬಲ

Published:
Updated:

ಭ್ರಷ್ಟಾಚಾರಮುಕ್ತ ಭಾರತ ಮಾಡಲು ಅವಿರತ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆಯವರು ಈಗ ಮತ್ತೊಮ್ಮೆ ನಿರಶನ ಕೈಗೊಂಡಿರುವುದು ಒಳ್ಳೆಯ ನಡೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಅವ್ಯವಹಾರಗಳ ಮುಖಾಂತರ ಭಾರಿ ಮೊತ್ತದ ಆಸ್ತಿಪಾಸ್ತಿ ಗಳಿಸುತ್ತಿದ್ದಾರೆ. ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಲೋಕಪಾಲರ ನೇಮಕಕ್ಕೆ ಹಿಂದೇಟು ಹಾಕಲಾಗುತ್ತಿದೆ.

ತಪ್ಪಿತಸ್ಥ ಜನಪ್ರತಿನಿಧಿಗಳನ್ನೂ ಕಠಿಣವಾದ ಶಿಕ್ಷೆಗೆ ಒಳಪಡಿಸಲು ಲೋಕಪಾಲರ ನೇಮಕದಿಂದ ಸಾಧ್ಯವಾಗುತ್ತದೆ. ಹೀಗಾಗಿ, ರಾಜಕೀಯ ನಾಯಕರಿಗೆ ಲೋಕಪಾಲರು ಬೇಕಿಲ್ಲದಿದ್ದರೂ ಸಾಮಾನ್ಯ ಜನರಿಗೆ ಅವರ ಅವಶ್ಯಕತೆ ಬಹಳಷ್ಟಿದೆ. ಅದಕ್ಕಾಗಿ ಹಜಾರೆ ಅವರನ್ನು ಬೆಂಬಲಿಸುವುದು ನಾಗರಿಕರ ಕರ್ತವ್ಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !