ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಆದರ್ಶ ತತ್ವ

Last Updated 17 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಸತತ ಐದು ವರ್ಷಗಳಿಂದ ಪ್ರಥಮ ರ‍್ಯಾಂಕ್‌ ಪಡೆಯುತ್ತಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ‘ಇಂದು’ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಸಾಧನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ಎಷ್ಟೋ ಬಾರಿ ಶಿಕ್ಷಕರಿಗೆ ಕಲಿಸುವ ಮನಸ್ಸಿದ್ದರೆ ಮಕ್ಕಳಿಗೆ ಕಲಿತುಕೊಳ್ಳುವ ಮನಸ್ಸಿರುವುದಿಲ್ಲ. ಮಕ್ಕಳಿಗೆ ಕಲಿಯುವ ಮನಸ್ಸಿದ್ದರೆ ಪಾಲಕರಿಗೆ ಓದಿಸುವ ಸಾಮರ್ಥ್ಯ ಇರುವುದಿಲ್ಲ. ಮಕ್ಕಳು– ಪೋಷಕರಿಗೆ ಮನಸ್ಸಿದ್ದರೆ ಶಿಕ್ಷಕರು ಸರಿಯಾಗಿ ಬೋಧಿಸುವುದಿಲ್ಲ.

‘ಶಿಕ್ಷಕ-ವಿದ್ಯಾರ್ಥಿ-ಪಾಲಕ ಒಡಗೂಡಿದ ತ್ರಿಕೋನ ಶ್ರಮ ಇದ್ದರೆ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ’ ಎಂದಿದ್ದರು ಶಿಕ್ಷಣ ತಜ್ಞ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ. ಬಹುಶಃ ಇಂತಹ ಆದರ್ಶ ತತ್ವವನ್ನು ಅಳವಡಿಸಿಕೊಂಡಿರುವುದೇ ಇಂದು ಕಾಲೇಜಿನ ಸಾಧನೆಗೆ ಪ್ರೇರಣೆ ಎನ್ನಿಸುತ್ತದೆ.
-ಮಲ್ಲಮ್ಮ ಯಾಟಗಲ್,ದೇವದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT