ಬಿಬಿಎಂಪಿ ಯಾರ ಹಿತ ಕಾಯುತ್ತಿದೆ?

ಭಾನುವಾರ, ಮೇ 26, 2019
22 °C

ಬಿಬಿಎಂಪಿ ಯಾರ ಹಿತ ಕಾಯುತ್ತಿದೆ?

Published:
Updated:

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಬೇಸಿಗೆ ಮಳೆಯ ಸಂದರ್ಭದಲ್ಲಿ ಕಂಡುಬಂದ ಅವಾಂತರಗಳು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕೈಗನ್ನಡಿ. ಹಲವೆಡೆ ಮಳೆ ನೀರು ರಸ್ತೆಗಳಲ್ಲಿ ಮಿನಿ ಕೆರೆಗಳನ್ನು ಸೃಷ್ಟಿಸಿತ್ತು.

ಮೋರಿಗಳು ರಸ್ತೆಗಳ ಮೇಲೆ ಉಕ್ಕಿದ್ದರಿಂದ ವಾಹನ ಚಾಲಕರು ಪರದಾಡಿದರು. ಪಾದಚಾರಿಗಳಿಗೆ ಮಳೆ ನಡುಕದ ಜೊತೆಗೆ ಮರ ಬೀಳುವ, ವಿದ್ಯುತ್‌ ಆಘಾತಕ್ಕೆ ಒಳಗಾಗುವ ಆತಂಕ.

ರಾಜಧಾನಿಯಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯ ವರ್ಷವಿಡೀ ನಡೆಯುವುದೇಕೆ? ವೈಟ್‌ ಟಾಪಿಂಗ್‌, ಮೆಟ್ರೊ, ಅಂಡರ್‌ಪಾಸ್‌, ಟೆಂಡರ್‌ಶ್ಯೂರ್‌, ಮೇಲ್ಸೇತುವೆ... ಹೀಗೆ ಒಂದಿಲ್ಲೊಂದು ಕಾಮಗಾರಿಗಳಿಂದಾಗಿ ನಿರಂತರ ನರಕ ದರ್ಶನ. ಬೇಸಿಗೆ ಮಳೆಗೇ ಹೀಗಾದರೆ ಇನ್ನು ಮುಂಗಾರು ಮಳೆಗೆ ನಾಗರಿಕರು ಎಂಥ ಕಷ್ಟಗಳನ್ನು ಅನುಭವಿಸಬೇಕಾಗಿ ಬರಬಹುದೋ. ಬಿಬಿಎಂಪಿ ಯಾರ ಹಿತ ಕಾಯುತ್ತಿದೆ?
-ಕಾಡನೂರು ರಾಮಶೇಷ, ಬೆಂಗಳೂರು

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !