ಮಂಗಳವಾರ, ಸೆಪ್ಟೆಂಬರ್ 17, 2019
24 °C

ಉಡಾಫೆ ಮಾತು ತಕ್ಕುದಲ್ಲ

Published:
Updated:

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲು ತಮ್ಮ ಪತ್ನಿ ಭವಾನಿ ಕಾರಣ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ. ಅಷ್ಟೇ ಅಲ್ಲದೆ, ‘ಇದಕ್ಕೆ ಕಾರಣ ಎನ್ನಲಾಗುತ್ತಿರುವ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏನು ಕಡಿದು ಕಟ್ಟೆ ಹಾಕಿದ್ದಾರೆ, ಯಾವ ಶಾಲೆಗೆ ಹೋಗಿ ಪಾಠ ಮಾಡಿದ್ದಾರೆ, ಎಷ್ಟು ಸಭೆಗಳನ್ನು ನಡೆಸಿದ್ದಾರೆ?’ ಎಂಬ ಉಡಾಫೆ ಮಾತನ್ನಾಡಿದ್ದಾರೆ.

ಆದರೆ, ಫಲಿತಾಂಶ ಸುಧಾರಣೆಗೆ ರೋಹಿಣಿಯವರು ಪಟ್ಟ ಪರಿಶ್ರಮ ಎಂಥದ್ದು ಎಂಬುದು ಆ ಜಿಲ್ಲೆಯ ಶಿಕ್ಷಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಗೊತ್ತಿರುವ ವಿಚಾರ.

‘ಬಿಜೆಪಿಗೆ ವೋಟು ಹಾಕಿದ್ದರಿಂದ ದಕ್ಷಿಣ ಕನ್ನಡ 5ನೇ ಸ್ಥಾನಕ್ಕೆ ಹೋಗಿದೆ. ಜಾತ್ಯತೀತ ಪಕ್ಷಗಳಿಗೆ ಮತ ಹಾಕಿದ್ದರೆ ಮೊದಲ ಸ್ಥಾನ ಬರುತ್ತಿತ್ತು’ ಎಂಬ ಅವರ ಮಾತು ಮೌಢ್ಯದ ಪರಮಾವಧಿ ಎನ್ನದೇ ವಿಧಿಯಿಲ್ಲ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಂದಿಸುವ ಇಂಥ ಸಚಿವರು ಇರುವುದು ಕನ್ನಡ ನಾಡಿನ ದೌರ್ಭಾಗ್ಯ.
-ಶಿವಕುಮಾರ ಬಂಡೋಳಿ, ಹುಣಸಗಿ

Post Comments (+)