ಬಯಲು ಬಹಿರ್ದೆಸೆ– ಚಿಂತೆ ಬಿಡಿಸಿ

ಶನಿವಾರ, ಮೇ 25, 2019
22 °C

ಬಯಲು ಬಹಿರ್ದೆಸೆ– ಚಿಂತೆ ಬಿಡಿಸಿ

Published:
Updated:

ಹೊತ್ತು ಏರಿದರೂ ಚಿಂತೆ, ಕತ್ತಲಾದರೂ ಚಿಂತೆ, ಕಳ್ಳಕಾಕರ ಚಿಂತೆ, ಕಲ್ಲು ಮುಳ್ಳುಗಳ ಚಿಂತೆ, ನಾಯಿ ಹಂದಿಗಳ ಚಿಂತೆ, ಯಾರಾದರೂ ಬಂದಾರೆಂಬ ಚಿಂತೆ... ಇದು ಗ್ರಾಮೀಣ ಭಾಗದಲ್ಲಿ ಬಯಲು ಬಹಿರ್ದೆಸೆಯನ್ನು ಅವಲಂಬಿಸಿರುವವರ ಸಂಕಷ್ಟ. ಅವರ ಈ ಬಗೆಯ ಎಲ್ಲ ಚಿಂತೆಗಳಿಗೆ ಶಾಶ್ವತ ಪರಿಹಾರವೆಂದರೆ ಶೌಚಾಲಯ ನಿರ್ಮಾಣ.

ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಪ್ರೋತ್ಸಾಹಧನವನ್ನು ನೀಡಿರುವುದರ ಪರಿಣಾಮವಾಗಿ ಕೆಲವು ಕಡೆ ಶೌಚಾಲಯಗಳು ಕಾಣಸಿಗುತ್ತವೆ. ಆದರೆ ಅಂಕಿ ಅಂಶಗಳಲ್ಲಿ ಇರುವಷ್ಟು ಶೌಚಾಲಯಗಳ ಸಂಖ್ಯೆ ವಾಸ್ತವದಲ್ಲಿ ಇಲ್ಲ. ಇದ್ದರೂ ಕೆಲವರು ಅವುಗಳನ್ನು ಬಳಸುವುದಿಲ್ಲ. ಮನುಷ್ಯನ ಮೂಲಭೂತ ಅವಶ್ಯಕತೆಗ
ಳಲ್ಲಿ ಶೌಚಾಲಯವೂ ಒಂದು ಎಂದು ಅರಿತು, ಸಮಾಜ ಮತ್ತು ಸರ್ಕಾರ ಬಹಿರ್ದೆಸೆಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು.
-ರಮೇಶ ಕೊ.ನಾ., ಇಸಾಮುದ್ರ, ಚಿತ್ರದುರ್ಗ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !