ಕ್ಯಾನ್‌ಗಳಲ್ಲಿ ಹಾಲು ಪೂರೈಸಲಿ

ಬುಧವಾರ, ಜೂನ್ 26, 2019
28 °C

ಕ್ಯಾನ್‌ಗಳಲ್ಲಿ ಹಾಲು ಪೂರೈಸಲಿ

Published:
Updated:

ಹಾಲಿನ ಡೈರಿಯವರು ಸಭೆ ಸಮಾರಂಭಗಳಲ್ಲಿ ಬಳಸುವುದಕ್ಕಾಗಿ ಹತ್ತು ಲೀಟರ್‌ ಸಾಮರ್ಥ್ಯದ ಕ್ಯಾನ್‌ಗಳಲ್ಲಿ ಹಾಲು, ಮೊಸರು ಮತ್ತು ಮಜ್ಜಿಗೆಯನ್ನು ಒದಗಿಸಬಹುದಲ್ಲವೇ? ಇದರಿಂದ, ಪ್ಯಾಕಿಂಗ್‌ಗೆ ಬಳಕೆಯಾಗುವ ಸಂಪನ್ಮೂಲ, ಮಾನವ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ.

ಮಾತ್ರವಲ್ಲ, ಪ್ಯಾಕಿಂಗ್ ವಸ್ತುವಿನಿಂದ ಆಗುವ ಮಾಲಿನ್ಯವನ್ನು ಸಹ ತಪ್ಪಿಸಬಹುದು. ಹೀಗೆ ಮಾಡುವುದರಿಂದ ಗ್ರಾಹಕರಿಗೆ ಸುಲಭ ದರದಲ್ಲಿ ಪೂರೈಕೆ ಮಾಡಲು ಸಹ ಸಾಧ್ಯವಾಗುತ್ತದೆ. ಹೋಟೆಲುಗಳು, ಜಾತ್ರೆ-ಉತ್ಸವಗಳು, ಕ್ರೀಡಾಕೂಟಗಳು, ಸಮ್ಮೇಳನ-ಸಮಾವೇಶಗಳು, ಮದುವೆ-ಮುಂಜಿ ಮತ್ತಿತರ ಸಭೆ ಸಮಾರಂಭಗಳನ್ನು ಗಮನದಲ್ಲಿಟ್ಟು ಈ ಕಾರ್ಯಕ್ಕೆ ಮುಂದಾಗಬೇಕಿದೆ.
-ಧನಂಜಯ ಜೀವಾಳ, ಮೂಡಿಗೆರೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !