ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಯೋಜಕ ಸಂಶೋಧನೆಗೆ ಪ್ರೋತ್ಸಾಹ ಬೇಡ

Last Updated 28 ಮೇ 2019, 18:15 IST
ಅಕ್ಷರ ಗಾತ್ರ

ಐನ್‌ಸ್ಟೀನ್‌ ಅವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಸಂಶೋಧನೆಯ ವಿವರಣೆ ಕೆಲವೇ ಪುಟಗಳಲ್ಲಿ ಇತ್ತು ಎಂದು ಹೇಳಲಾಗುತ್ತದೆ. ನಮ್ಮಲ್ಲಿ ಪ್ರತಿವರ್ಷ ಸಾವಿರಾರು ಜನ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದುಕೊಳ್ಳುತ್ತಾರೆ. ಆದರೆ ಬಹುತೇಕ ಸಂಶೋಧನೆಗಳು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಹೀಗೆ ಕೆಲಸಕ್ಕೆ ಬಾರದ ವಿಷಯಗಳನ್ನು ನೂರಾರು ಪುಟಗಟ್ಟಲೆ ಬರೆಯುವವರೇ ಹೆಚ್ಚು.

ಇಂತಹ ವಿಚಾರದ ಮೇಲೂ ಒಂದು ಪಿಎಚ್.ಡಿ ಇದೆ ಎಂದು ಹೇಳಿಕೊಳ್ಳುವುದನ್ನು ಬಿಟ್ಟರೆ, ಯಾವ್ಯಾವುದೋ ವಿಷಯಗಳ ಬಗ್ಗೆಅಧ್ಯಯನ ಮಾಡುವುದರಿಂದ ಏನು ಪ್ರಯೋಜನ? ಒಂದಿಷ್ಟು ಮಂದಿ ಡಾಕ್ಟರೇಟ್‌ ಪ‍ಡೆಯುವುದು, ಇನ್ನೊಂದಿಷ್ಟು ಜನರು ಮಾರ್ಗದರ್ಶಿಗಳಾಗಿ ಲಾಭ ಮಾಡಿಕೊಳ್ಳುವುದನ್ನು ಬಿಟ್ಟರೆ ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಸಮಾಜಕ್ಕೆ ಯಾವ ಕಾಲಕ್ಕೂ ಉಪಯೋಗಕ್ಕೆ ಬಾರದ ಸಂಶೋಧನೆಗಳನ್ನು ಸರ್ಕಾರ
ಪ್ರೋತ್ಸಾಹಿಸಬಾರದು.

-ಸುಕುಮಾರ ಎಂ.,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT