ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ರಜೆ: ಜನರ ಪಾಡು?

Last Updated 30 ಮೇ 2019, 19:01 IST
ಅಕ್ಷರ ಗಾತ್ರ

ಸರ್ಕಾರಿ ನೌಕರರಿಗೆ ನೀಡಲಾಗುವ ವಾರ್ಷಿಕ ರಜೆಗಳಿಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಹಲವಾರು ಜಯಂತಿಗಳ ರಜೆಗಳನ್ನು ರದ್ದುಪಡಿಸಿ, ಅವುಗಳನ್ನು ನಿರ್ಬಂಧಿತ ರಜೆಗಳನ್ನಾಗಿ ಪರಿವರ್ತಿಸುವ ಸಲಹೆ ನೀಡಿದೆ. ಇದು ಸಮಂಜಸವೇ. ಈಗಲೂ ಹಳ್ಳಿಗಳ ಮಟ್ಟದಲ್ಲಿ ಸರ್ಕಾರಿ ರಜೆಗಳನ್ನು ಅರಿಯದೆ, ಆ ದಿನಗಳಂದು ತಾವು ಮಾಡುವ ಕೂಲಿ ಕೆಲಸ ಬಿಟ್ಟು ಯಾವ್ಯಾವುದೋ ಕೆಲಸಗಳಿಗಾಗಿ ಸರ್ಕಾರಿ ಕಚೇರಿ, ಬ್ಯಾಂಕುಗಳಿಗೆ ಅಲೆದು ಸಾಕಾಗುವ ಸಾಮಾನ್ಯ ಜನರಿದ್ದಾರೆ. ಅವರ ಬವಣೆ ಇದರಿಂದ ನಿವಾರಣೆಯಾಗಬಹುದು.

ಇದರ ಜೊತೆಗೆ ಇನ್ನೊಂದು ಮಹತ್ವದ ಶಿಫಾರಸನ್ನೂ ಮಾಡಲಾಗಿದೆ. ಅದು ಈಗಿರುವ ಎರಡನೇ ಶನಿವಾರದ ರಜೆಯ ಜೊತೆ ನಾಲ್ಕನೇ ಶನಿವಾರವೂ ರಜೆ ನೀಡುವುದು. ಇದರಿಂದ ನೌಕರರ ತೃಪ್ತಿಯ ಮಟ್ಟ ಹೆಚ್ಚಲಿದ್ದು, ಕಾರ್ಯಕ್ಷಮತೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಇದು ಮಾತ್ರ ಅಚ್ಚರಿಗೊಳಿಸುವಂಥದ್ದು. ಸರ್ಕಾರಿ ನೌಕರರಿಗೆ ತೃಪ್ತಿಯ ಮಟ್ಟ ಸ್ವಲ್ಪಮಟ್ಟಿಗೆ ಹೆಚ್ಚಬಹುದು. ಆದರೆ ಪ್ರತಿಯೊಂದು ಕೆಲಸಕ್ಕೂ ಅವರ ಹಾಜರಿಯನ್ನೇ ನೆಚ್ಚಿಕೊಂಡ ಜನರ ಪಾಡು?

-ಹೊಸಮನೆ ವೆಂಕಟೇಶ,ಟಿ.ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT