ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸಿ ಉಪಕರಿಸಿ

Last Updated 11 ಜುಲೈ 2019, 17:18 IST
ಅಕ್ಷರ ಗಾತ್ರ

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಪ್ರಮಾಣ ಸ್ವಲ್ಪ ಏರಿಕೆಯಾಗಿದೆ. ಆದರೂ ಮಂಡ್ಯ ಭಾಗದಲ್ಲಿ ರೈತರು ಬೆಳೆದ ಕಬ್ಬು, ಮಳೆ ಇಲ್ಲದೆ ಕ್ರಮೇಣ ಒಣಗುತ್ತಿದೆ.

ಎದೆ ಮಟ್ಟಕ್ಕೆ ಬೆಳೆದು ನಿಂತ ಮಕ್ಕಳೂ ಒಂದೇ ನಾವು ಬೆಳೆದ ಬೆಳೆಯೂ ಒಂದೇ. ಕಷ್ಟಪಟ್ಟು ಆರೈಕೆ ಮಾಡಿದ ಬೆಳೆಯು ಕಣ್ಣ ಮುಂದೆಯೇ ಒಣಗುವುದನ್ನು ನೋಡಿದರೆ ಯಾವ ರೈತನಿಗೆ ತಾನೇ ನೋವಾಗದು? ನಗರ ಪ್ರದೇಶದಲ್ಲಿ ನೀರನ್ನು ಪೋಲು ಮಾಡುವವರು ಸ್ವಲ್ಪ ಎಚ್ಚರವಹಿಸಿ, ನೀರು ಉಳಿಸಿ ಅದನ್ನು ನಮಗೆ ನೀಡಿದರೆ ನಾವು ನಮ್ಮ ಬೆಳೆಯನ್ನು ಉಳಿಸಿಕೊಳ್ಳಬಹುದು.

ನಾವು ಬೆಳೆದ ಬೆಳೆಗಳು ಬದುಕುವಂತಾಗಿ, ಸ್ವಲ್ಪ ಹಣವಾದರೂ ನಮ್ಮ ಮಾಸಿದ ಅಂಗಿಯ ಹರಕು ಜೇಬುಗಳನ್ನು ಸೇರುವಂತೆ ಮಾಡುವ ನಿಟ್ಟಿನಲ್ಲಿ ನಗರ ಪ್ರದೇಶದ ಜನರು ಉಪಕರಿಸಬೇಕು.
-ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT