ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಲಿ

reader's letter
Last Updated 3 ಸೆಪ್ಟೆಂಬರ್ 2019, 16:52 IST
ಅಕ್ಷರ ಗಾತ್ರ

ಮಂದಗತಿಯಲ್ಲಿ ಸಾಗುತ್ತಿರುವ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಹಣಕಾಸು ಸಚಿವರು ಘೋಷಿಸಿರುವ ಕ್ರಮಗಳಿಂದ ಅರ್ಥವ್ಯವಸ್ಥೆಯು ಪುನಶ್ಚೇತನಗೊಳ್ಳುವ ಬದಲಿಗೆ ವಿರುದ್ಧ ದಿಶೆಯಲ್ಲಿ ನಡೆಯುವ ಸಂಭವವೇ ಹೆಚ್ಚು.

ಯಾಕೆಂದರೆ ಅವರು ಕೈಗೊಂಡಿರುವ ಕ್ರಮಗಳೇ ಅರ್ಥ ವ್ಯವಸ್ಥೆಯ ಮಂದಗತಿಗೆ ಕಾರಣಗಳು. ಸರ್ಕಾರ ಸೂಚಿಸುತ್ತಿರುವ ಕ್ರಮಗಳಿಂದ ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಬಹುದೇ ಹೊರತು ಬೇಡಿಕೆ ಕುದುರಲಾರದು. ಜನರ ಕೈಯಲ್ಲಿ ಕೊಳ್ಳುವ ಸಾಮರ್ಥ್ಯ, ಅಂದರೆ ಅವರ ಖರೀದಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸುವ ಕ್ರಮಗಳಾಗಬೇಕು.

ಬಂಡವಾಳವಾದದ ಚೌಕಟ್ಟಿನಾಚೆಗೆ ಯೋಚಿಸಿದಾಗ ಮಾತ್ರ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅಂತಹ ಕೆಲವು ಸಲಹೆಗಳು ಇಲ್ಲಿವೆ: ಕಂಪನಿಗಳು ಹಾಗೂ ಬ್ಯಾಂಕುಗಳ ವಿಲೀನಕ್ಕೆ ತಡೆ ನೀಡುವುದು. ರೋಗಗ್ರಸ್ತ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬೆಂಬಲ ನೀಡುವ ಬದಲಿಗೆ ಅವು ದೊಡ್ಡ ಮೊತ್ತದ ಸುಸ್ತಿ ಸಾಲಗಳ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಕಂಪನಿಗಳ ಸಾಲಗಳನ್ನು ‘ರೈಟ್ ಆಫ್’ ಮಾಡುವುದೆಂದರೆ, ರೋಗಿಗೆ ವಿಷ ಉಣಿಸಿದಂತೆ.

ಕಾರ್ಪೊರೇಟ್ ವಲಯವು ತನ್ನ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ಮರುಪಾವತಿಸಲು ಒತ್ತಾಯಿಸಬೇಕು. ಕೃಷಿ ಹಿಡುವಳಿಯ ಮೇಲೆ ಮಿತಿ ವಿಧಿಸಿರುವ ರೀತಿಯಲ್ಲೇ ಕೃಷಿಯೇತರ ಭೂ ಹಿಡುವಳಿ ಮತ್ತು ನಗರ ಪ್ರದೇಶಗಳ ಸ್ವತ್ತುಗಳ ಮೇಲೆ ಕೂಡ ಮಿತಿ ವಿಧಿಸಬೇಕು. ಸ್ಥಳೀಯರಿಗೆ ಶೇ 100ರಷ್ಟು ಉದ್ಯೋಗಾವಕಾಶ ಸೃಷ್ಟಿಸುವ ವಿಧದಲ್ಲಿ ತಾಲ್ಲೂಕು ಮಟ್ಟದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳು
ವುದು. ಕೃಷಿಗೆ ಕೈಗಾರಿಕಾ ಸ್ಥಾನ ಒದಗಿಸುವುದು. ಸಹಕಾರಿ ಅರ್ಥವ್ಯವಸ್ಥೆಯ ಅನುಷ್ಠಾನ. ಇಂದಿನ ಆರ್ಥಿಕ ಮಂದ ಗತಿಯ ನಡೆಯು ಆರ್ಥಿಕ ಹಿಂಜರಿತವಾಗಿ ಪರಿವರ್ತಿತವಾಗುವ ಮೊದಲೇ ಸರ್ಕಾರ ಕಾರ್ಯಪ್ರವೃತ್ತ ಆಗಬೇಕಿದೆ.

ಗಣೇಶ ಭಟ್ಟ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT