ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠೆಗೆ ಶಿಕ್ಷೆಯ ಬೆಲೆ ತರವಲ್ಲ

Last Updated 24 ಸೆಪ್ಟೆಂಬರ್ 2019, 19:59 IST
ಅಕ್ಷರ ಗಾತ್ರ

ಕಟ್ಟಡ ಕಾರ್ಮಿಕರ ಕಲ್ಯಾಣದ ಉದ್ದೇಶಕ್ಕೆ ಮೀಸಲಿಟ್ಟ ನಿಧಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ಒಪ್ಪದಿದ್ದ ಕಾರಣಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಯಾವುದೇ ಹುದ್ದೆ ತೋರಿಸದೆ ‘ಶಿಕ್ಷೆ’ಯ ರೂಪದಲ್ಲಿ ಪ್ರಭಾವಿಗಳು ವರ್ಗಾಯಿಸಿರುವ ಕ್ರಮ ಸರಿಯಲ್ಲ.

ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಸಂಖ್ಯೆ ಕಡಿಮೆ. ನಿಷ್ಠೆ, ಪ್ರಾಮಾಣಿಕತೆಯ ದಾರಿಯಲ್ಲೇ ನಡೆಯಬೇಕೆಂದು ಗಟ್ಟಿ ನಿರ್ಧಾರ ಮಾಡಿದವರಿಗೆ ಈ ರೀತಿಯ ಶಿಕ್ಷೆ ದೊರೆತಿರುವುದು ಇದೇ ಮೊದಲಲ್ಲ. ಬಹಳ ಹಿಂದಿನಿಂದಲೂ ನಡೆದುಬಂದ ಪರಿಪಾಟ ಎಂಬುದು ಕಹಿಸತ್ಯ! ಅಷ್ಟಾದರೂ ಎಂದಿಗೂ ಸತ್ಯಕ್ಕೇ ಜಯ ಎಂಬುದನ್ನು ಇದರ ಹಿಂದಿರುವ ಸೂತ್ರಧಾರಿಗಳು ಅರಿಯಬೇಕಿದೆ.

-ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT