ಗುರುವಾರ , ನವೆಂಬರ್ 21, 2019
27 °C

ಅಭಿವೃದ್ಧಿ ವಿಷಯದಲ್ಲಿ ‘ಅಹಂ’ ಸಲ್ಲ

Published:
Updated:

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಸಿದು, ವಿತ್ತೀಯ ಕೊರತೆ ಅನುಭವಿಸುತ್ತಿರುವುದನ್ನು ಯಾರೂ ಅಲ್ಲಗಳೆಯಲಾಗದು.

ಇದನ್ನು ವಿಶ್ವಬ್ಯಾಂಕ್‌, ಐಎಂಎಫ್‌ ಸಹ ದೃಢಪಡಿಸಿವೆ. ಅಲ್ಲದೆ ಅರ್ಥಶಾಸ್ತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದ ಭಾರತ ಸಂಜಾತ ಅಭಿಜಿತ್ ಬ್ಯಾನರ್ಜಿ ಅವರೂ ‘ಭಾರತದ ಆರ್ಥಿಕತೆಯು  ಶೋಚನೀಯ ಸ್ಥಿತಿಯಲ್ಲಿದೆ’ ಎಂದು ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅಧಿಕಾರಸ್ಥರು ಮಾತ್ರ ಆರ್ಥಿಕ ಹಿನ್ನಡೆಗೆ ಸಂಬಂಧಿಸಿದ ಪ್ರತಿಪಾದನೆಗಳನ್ನು ಅಲ್ಲಗಳೆಯುತ್ತಿದ್ದಾರೆ.

ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಈಗಲಾದರೂ ಸ್ವಪ್ರತಿಷ್ಠೆ ಮತ್ತು ಅಹಂ ಅನ್ನು ಬದಿಗಿಟ್ಟು, ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್, ಅಭಿಜಿತ್ ಬ್ಯಾನರ್ಜಿ, ಕರ್ನಾಟಕ ಮೂಲದವರಾದ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಮುಂತಾದ ತಜ್ಞರ ಸಲಹೆ, ಸೂಚನೆಗಳನ್ನು ಪಡೆದು ದೇಶದ ಆರ್ಥಿಕ ಪುನಶ್ಚೇತನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
-ಮನೋಹರ ಜಿ.ಎನ್‌., ತುಮಕೂರು

 

ಪ್ರತಿಕ್ರಿಯಿಸಿ (+)