ಗುರುವಾರ , ನವೆಂಬರ್ 21, 2019
20 °C

ವಾಚಕರವಾಣಿ | ಹೊನ್ನಾಳಿ ಕೋಣ ಪ್ರಕರಣ, ಆಗಿದ್ದು ಯಾರ ಸುಖಾಂತ್ಯ?

Published:
Updated:

‘ಸುಖಾಂತ್ಯ ಕಂಡ ಕೋಣದ ವಿವಾದ’ ಎಂಬ ತಲೆಬರಹವನ್ನುಳ್ಳ ವರದಿಯಲ್ಲಿ ‘ರಕ್ತದ ಮಾದರಿ ತೆಗೆದರೆ ಕೋಣವು ದೇವರ ಬಲಿಗೆ ಅರ್ಹತೆ ಪಡೆಯುವುದಿಲ್ಲ’ ಎಂಬ ಕಾರಣಕ್ಕಾಗಿ ಎರಡು ಗ್ರಾಮಗಳ ಮುಖಂಡರು ಸ್ವಾಮೀಜಿಯವರ ಮಧ್ಯಸ್ಥಿಕೆಯಲ್ಲಿ ರಾಜಿಯಾದ ಸುದ್ದಿಯನ್ನು (ಪ್ರ.ವಾ., ಅ. 19) ಓದಿದಾಗ, ‘ಸುಖಾಂತ್ಯ ಯಾರಿಗಾಯಿತು’ ಎಂಬ ಪ್ರಶ್ನೆಯು ನನ್ನನ್ನು ಕಾಡತೊಡಗಿತು.

ಜಾತಿ, ಧರ್ಮ ಮತ್ತು ದೇವರುಗಳ ಕುರಿತು ಮಾಡುವ ಆಚರಣೆಯಲ್ಲಿನ ಕಟ್ಟುಪಾಡುಗಳ ನಡುವೆ ಸಿಲುಕಿ ನಾನಾ ಬಗೆಯ ಹಿಂಸೆ, ಕೊಲೆ, ಸುಲಿಗೆಗೆ ಬಲಿಯಾಗುತ್ತಿರುವ ಅಸಹಾಯಕ ವ್ಯಕ್ತಿಗಳ ಪ್ರತಿನಿಧಿಯಂತೆ ಆ ಕೋಣ ಕಂಡುಬಂದಿತು.

- ಸಿ.ಪಿ.ನಾಗರಾಜ, ಬೆಂಗಳೂರು

ಇನ್ನಷ್ಟು...

ಸುಖಾಂತ್ಯ ಕಂಡ ಕೋಣನ ವಿವಾದ
ದೇವರ ಕೋಣದ ಡಿಎನ್‍ಎ ಪರೀಕ್ಷೆಗೆ ಪೊಲೀಸರ ಸಿದ್ಧತೆ
ದೇವರ ಕೋಣದ ಮೆರವಣಿಗೆ

ಪ್ರತಿಕ್ರಿಯಿಸಿ (+)